ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಿದ್ದು ಅದ್ಭುತ ಅನುಭವ: ಅವನಿ ಚತುರ್ವೇದಿ

Last Updated 5 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ನವದೆಹಲಿ: ಯುದ್ಧ ವಿಮಾನದ ಪೈಲಟ್‌ ಆಗಿರುವುದು ಅತ್ಯಂತ ಸಂತಸ ತಂದಿದೆ. ಯುವಜನರಿಗೆ ತಮ್ಮ ವೃತ್ತಿ ಬದುಕು ರೂಪಿಸಿಕೊಳ್ಳಲು ವಾಯುಪಡೆಯಲ್ಲಿ ವಿಫುಲ ಅವಕಾಶಗಳಿವೆ ಎಂದು ಭಾರತೀಯ ವಾಯುಪಡೆಯ (ಐಎಎಫ್‌) ಯುದ್ಧವಿಮಾನದ ಪೈಲಟ್‌ ಅವನಿ ಚತುರ್ವೇದಿ ಹೇಳಿದ್ದಾರೆ.

ಚತುರ್ವೇದಿ ಅವರು ಜಪಾನ್‌ ವಾಯುಪಡೆಯೊಂದಿಗೆ ಜಪಾನ್‌ನ ಹ್ಯಾಕುರಿ ವಾಯುನೆಲೆಯಲ್ಲಿ ಜ.12ರಿಂದ 26ರ ವರೆಗೆ ನಡೆದ ವೈಮಾನಿಕ ಪ್ರದರ್ಶನದಲ್ಲಿ ಎಸ್‌ಯು–30ಎಂಕೆಐ ಪೈಲಟ್‌ ಆಗಿದ್ದರು. ಈ ಮೂಲಕ ವಿದೇಶಿ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾದ ಐಎಎಫ್‌ನ ಮೊದಲ ಮಹಿಳಾ ಪೈಲಟ್ ಎಂಬ ಇತಿಹಾಸ ಬರೆದಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ವಿದೇಶಿ ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಿದ್ದು ನನಗೆ ಸಿಕ್ಕ ಅದ್ಭುತ ಅವಕಾಶ ಮತ್ತು ಅನುಭವ’ ಎಂದು ಹೇಳಿದರು.

ಅವನಿ ಚತುರ್ವೇದಿ, ಮೋಹನಾ ಸಿಂಗ್ ಮತ್ತು ಭಾವನಾ ಕಾಂತ್ ಅವರನ್ನು 2016ರಲ್ಲಿ ಐಎಎಫ್‌ನ ಯುದ್ಧವಿಮಾನಗಳ ಮೊದಲ ಮೂವರು ಮಹಿಳಾ ಪೈಲಟ್‌ಗಳಾಗಿದೆ ನಿಯುಕ್ತಿಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT