ಹೈದರಾಬಾದ್: ಹೈದರಾಬಾದ್ನಿಂದ ಬೆಳಗಾವಿಗೆ ಸಂಚರಿಸುತ್ತಿದ್ದ ವಿಶೇಷ ರೈಲು(ಸಂಖ್ಯೆ 07043), ತೆಲಂಗಾಣದ ಶಂಕರಪಲ್ಲಿ ರೈಲು ನಿಲ್ದಾಣದಲ್ಲಿದ್ದ ವೇಳೆ, ಬೋಗಿಯೊಂದರಲ್ಲಿ ಗುರುವಾರ ಹೊಗೆ ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.

ಬ್ರೇಕ್ ಬೈಂಡಿಂಗ್ನಿಂದಾಗಿ ಬೋಗಿಯೊಂದರಲ್ಲಿ ಸಂಜೆ 7.26ರ ವೇಳೆ ಹೊಗೆ ಕಾಣಿಸಿಕೊಂಡಿತ್ತು. ಜೊತೆಗೆ ಕಿಡಿಯೂ ಕಂಡುಬಂದಿತ್ತು. ಇದನ್ನು ಗುರುತಿಸಿದ ಸ್ಟೇಷನ್ ಮಾಸ್ಟರ್, ಸಂಬಂಧಿಸಿದ ಸಿಬ್ಬಂದಿಗೆ ಮಾಹಿತಿ ನೀಡಿದರು ಎಂದು ದಕ್ಷಿಣ ಮಧ್ಯ ರೈಲ್ವೆ ಅಧಿಕಾರಿಗಳು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.

ಪರಿಶೀಲನೆ ನಡೆಸಿ, ಸಮಸ್ಯೆಯನ್ನು ನಿವಾರಿಸಿದ ಬಳಿಕ ರೈಲು ಸಂಚಾರ ಮುಂದುವರಿಸಿತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.