ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಾವತಿ, ಅಖಿಲೇಶ್‍ಗಿಂತ ಮೋದಿ ಮತ್ತು ಯೋಗಿ ನನ್ನ ಆಯ್ಕೆ: ಅಮರ್ ಸಿಂಗ್

Last Updated 31 ಜುಲೈ 2018, 9:21 IST
ಅಕ್ಷರ ಗಾತ್ರ

ನವದೆಹಲಿ: ಬಿಎಸ್‌‍ಪಿ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಕಿಡಿ ಕಾರಿದ ಅಮರ್ ಸಿಂಗ್, ಈ ಪಕ್ಷಗಳು ಜಾತಿವಾದಿ ಎಂದಿದ್ದಾರೆ. ಅದೇ ವೇಳೆಮಾಯಾವತಿ ಮತ್ತು ಅಖಿಲೇಶ್‍ಗೆ ಬೆಂಬಲ ನೀಡುವುದಕ್ಕಿಂತ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೇ ನನ್ನ ಆಯ್ಕೆ ಎಂದು ಅಮರ್ ಸಿಂಗ್ ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಂಗ್, ನಾನು ವಿವೇಕ ಮತ್ತು ಸಂವೇದನೆ ಇರುವ ರಾಜಕೀಯದಲ್ಲಿ ನಂಬಿಕೆ ಇರಿಸಿದ್ದೇನೆ.ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಇಲ್ಲ.ಸಮಾಜವಾದಿ ಪಕ್ಷ ಮತ್ತು ಬಿಎಸ್‌ಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು.ಈ ಎರಡೂ ಪಕ್ಷಗಳು ಜಾತೀವಾದದ ರಾಜಕಾರಣ ಮಾಡುತ್ತಿದ್ದು, ಸಮುದಾಯದ ಒಗ್ಗಟ್ಟಿಗೆ ಜಾತ್ಯಾತೀತ ನಿಲುವು ಬೇಕು

ನಿಮಗೆ ಬಬುವಾ (ಚಿಕ್ಕ ಹುಡುಗ - ಅಖಿಲೇಶ್ ಯಾದವ್ )- ಬುವಾ (ಅತ್ತೆ - ಮಾಯಾವತಿ) ಬೇಕೋ ಮೋದಿ ಮತ್ತು ಯೋಗಿ ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT