ಸೋಮವಾರ, 20 ಮೇ 2024

ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ ಸುದ್ದಿಗಳು; ಅಕ್ಟೋಬರ್ 14 ಶನಿವಾರ 2023

Published 14 ಅಕ್ಟೋಬರ್ 2023, 13:25 IST
Last Updated 14 ಅಕ್ಟೋಬರ್ 2023, 13:25 IST
ಅಕ್ಷರ ಗಾತ್ರ
Introduction

ರಾಜ್ಯ, ದೇಶ, ವಿದೇಶಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

1

IND vs PAK | ಭಾರತಕ್ಕೆ 192 ರನ್ ಗುರಿ ನೀಡಿದ ಪಾಕ್

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪಂದ್ಯದಲ್ಲಿ ಭಾರತದ ಬೌಲರ್‌ಗಳು ತೋರಿದ ಸಂಘಟಿತ ಪ್ರದರ್ಶನ ಎದುರು ಕಂಗೆಟ್ಟ ಪಾಕಿಸ್ತಾನ ತಂಡ 191 ರನ್‌ಗಳಿಗೆ ಆಲೌಟ್‌ ಆಗಿದೆ.

ಪೂರ್ತಿ ಓದಲು: IND vs PAK | ಮಧ್ಯಮ ಕ್ರಮಾಂಕದ ಕುಸಿತ; ಭಾರತಕ್ಕೆ 192 ರನ್ ಗುರಿ ನೀಡಿದ ಪಾಕ್

2

235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ದೆಹಲಿಗೆ

ಇಸ್ರೇಲ್‌ನಿಂದ ಹೊರಟ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಇಂದು ಬೆಳಿಗ್ಗೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.

ಪೂರ್ತಿ ಓದಲು: ದೆಹಲಿಗೆ ಬಂದಿಳಿದ ಇಸ್ರೇಲ್‌ನಿಂದ 235 ಭಾರತೀಯರನ್ನು ಹೊತ್ತ ಎರಡನೇ ವಿಮಾನ

3

ಅಬಕಾರಿ ಡಿ.ಸಿ. ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ

ಮದ್ಯದ ಅಂಗಡಿ ಆರಂಭಕ್ಕೆ ಪರವಾನಗಿ ಕೊಡಲು ಲಂಚ ಪಡೆಯುತ್ತಿರುವಾಗ ಅಬಕಾರಿ ಡಿ.ಸಿ. ಸೇರಿದಂತೆ ನಾಲ್ವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಪೂರ್ತಿ ಓದಲು: ಮದ್ಯದಂಗಡಿ ಪರವಾನಗಿಗೆ ಲಂಚ: ಅಬಕಾರಿ ಡಿ.ಸಿ. ಸೇರಿ ನಾಲ್ವರು ಲೋಕಾಯುಕ್ತ ಬಲೆಗೆ

4

ಹಮಾಸ್‌ ಬಂಡುಕೋರರು ಅಲ್‌ ಖೈದಾಗಿಂತ ಕ್ರೂರಿಗಳು: ಜೋ ಬೈಡನ್‌

ಇಸ್ರೇಲ್‌ ಮೇಲೆ ದಾಳಿ ಮಾಡಿ ಸಾವಿರಾರು ಜನರ ಸಾವಿಗೆ ಕಾರಣವಾದ ಹಮಾಸ್‌ ಬಂಡುಕೋರರು ಅಲ್‌ ಖೈದಾಕ್ಕಿಂತ ದುಷ್ಟರು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹೇಳಿದ್ದಾರೆ.

ಪೂರ್ತಿ ಓದಲು: ಹಮಾಸ್‌ ಬಂಡುಕೋರರು ಅಲ್‌ ಖೈದಾಗಿಂತ ಕ್ರೂರಿಗಳು: ಜೋ ಬೈಡನ್‌

5

24 ತಾಸಿನಲ್ಲಿ ಸ್ಥಳಾಂತರಕ್ಕೆ ಇಸ್ರೇಲ್ ಎಚ್ಚರಿಕೆ; ವಿಶ್ವಸಂಸ್ಥೆ ಕಳವಳ

ಉತ್ತರ ಗಾಜಾದಲ್ಲಿರುವ 10 ಲಕ್ಷಕ್ಕೂ ಅಧಿಕ ಜನರು 24 ತಾಸಿನೊಳಗೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ನೀಡಿದ ಎಚ್ಚರಿಕೆಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಪೂರ್ತಿ ಓದಲು: ಗಾಜಾ: 24 ತಾಸಿನಲ್ಲಿ ಸ್ಥಳಾಂತರಕ್ಕೆ ಇಸ್ರೇಲ್ ಎಚ್ಚರಿಕೆ; ವಿಶ್ವಸಂಸ್ಥೆ ಕಳವಳ

6

ಭ್ರಷ್ಟಾಚಾರ ನಿಗ್ರಹ ಅಗತ್ಯ: ಮುಖ್ಯಮಂತ್ರಿಗೆ ಗುತ್ತಿಗೆದಾರರ ಸಂಘದ ಆಗ್ರಹ

'ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ತಕ್ಷಣ ಅದಕ್ಕೆ ಕಡಿವಾಣ ಹಾಕಬೇಕು' ಎಂದು ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದೆ.

ಪೂರ್ತಿ ಓದಲು: ಭ್ರಷ್ಟಾಚಾರ ನಿಗ್ರಹ ಅಗತ್ಯ: ಮುಖ್ಯಮಂತ್ರಿಗೆ ಗುತ್ತಿಗೆದಾರರ ಸಂಘದ ಆಗ್ರಹ

7

ಸರಣಿ ಅಪಘಾತ: ಹೊತ್ತಿ ಉರಿದ ಕಾರು, SP ಕಾರು ಜಖಂ

ಶ್ರೀರಂಗಪಟ್ಟಣ ತಾಲ್ಲೂಕಿನ ಟಿ.ಎಂ. ಹೊಸೂರು ಗೇಟ್ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಶನಿವಾರ ಸರಣಿ ಅಪಘಾತವಾಗಿದ್ದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರು ಸೇರಿ ನಾಲ್ಕು ಕಾರು ಜಖಂಗೊಂಡಿವೆ, ಒಂದು ಕಾರು ಹೊತ್ತಿ ಉರಿದಿದೆ.

ಪೂರ್ತಿ ಓದಲು: ಬೆಂಗಳೂರು-ಮೈಸೂರು ಹೆದ್ದಾರಿ | ಸರಣಿ ಅಪಘಾತ: ಹೊತ್ತಿ ಉರಿದ ಕಾರು, SP ಕಾರು ಜಖಂ

8

‌ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ಪಂ. ರಾಜೀವ ತಾರಾನಾಥ ಸ್ಪಷ್ಟನೆ

ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.

ಪೂರ್ತಿ ಓದಲು: ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ಪಂ. ರಾಜೀವ ತಾರಾನಾಥ ಸ್ಪಷ್ಟನೆ

9

ಯುವಜನರ ಕನಸುಗಳನ್ನು ಬಿಆರ್‌ಎಸ್‌ ಕೊಂದಿದೆ: ರಾಹುಲ್‌ ಗಾಂಧಿ

‘ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಸರ್ಕಾರವು ಯುವಜನರ ಕನಸುಗಳು ಮತ್ತು ಆಶೋತ್ತರಗಳನ್ನು ಕೊಂದಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಹೇಳಿದ್ದಾರೆ.

ಪೂರ್ತಿ ಓದಲು: ಯುವಜನರ ಕನಸುಗಳನ್ನು ಬಿಆರ್‌ಎಸ್‌ ಕೊಂದಿದೆ: ರಾಹುಲ್‌ ಗಾಂಧಿ

10

₹ 42 ಕೋಟಿ ವಶ: ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ

ಗುತ್ತಿಗೆದಾರ ಮತ್ತು ಅವರ ಸಂಬಂಧಿಕರ ಮನೆಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 42 ಕೋಟಿ ನಗದು ಮೂಲದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಪೂರ್ತಿ ಓದಲು: ₹ 42 ಕೋಟಿ ವಶ: ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ