ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚ್ಚಾಬಾಂಬ್ ಸ್ಫೋಟ: ಮಣಿಪುರದಲ್ಲಿ ಮೇಲ್ಸೇತುವೆಗೆ ಹಾನಿ

Published 24 ಏಪ್ರಿಲ್ 2024, 14:07 IST
Last Updated 24 ಏಪ್ರಿಲ್ 2024, 14:07 IST
ಅಕ್ಷರ ಗಾತ್ರ

ಇಂಫಾಲ್: ಹಿಂಸಾಚಾರ ಪೀಡಿತ ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ–2ರಲ್ಲಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಕಚ್ಚಾಬಾಂಬ್ ಸ್ಫೋಟದಿಂದಾಗಿ ಹೆದ್ದಾರಿಯಲ್ಲಿದ್ದ ಮೇಲ್ಸೇತುವೆಯ ಕೆಲವು ಭಾಗ ಹಾನಿಗೀಡಾಗಿದೆ. ಇದರಿಂದ ಈ ಮಾರ್ಗದಲ್ಲಿ ಹಲವು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಸಪರ್‌ಮೀನಾ ಮತ್ತು ಕೌಬ್ರು ಲೀಖಾ ಎಂಬ ಪ್ರದೇಶಗಳ ಮಧ್ಯೆ ಇರುವ ಮೇಲ್ಸೇತುವೆ ಮೇಲೆ ರಾತ್ರಿ 12.45ರ ವೇಳೆಗೆ ಬಾಂಬ್ ಸ್ಫೋಟ ಸಂಭವಿಸಿದೆ. ಹೀಗಾಗಿ ಮಣಿಪುರ ರಾಜಧಾನಿ ಇಂಫಾಲ್ ಮತ್ತು ನಾಗಾಲ್ಯಾಂಡ್‌ನ ದೀಮಾಪುರವನ್ನು ಸಂಪರ್ಕಿಸುವ ಈ ಮೇಲ್ಸೇತುವೆಗೆ ವಾಹನಗಳು ಬಾರದಂತೆ ತಡ್ಡೆಯೊಡ್ಡಲಾಯಿತು. ಇದರಿಂದಾಗಿ ಭಾರಿ ದಟ್ಟಣೆ ಉಂಟಾಗಿತ್ತು. ಅದೃಷ್ಟಾವಶತ್ ಸಾವು–ನೋವಿನ ವರದಿಯಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. 

ಕಳೆದ ವರ್ಷ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಲ್ಲಿ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT