ನವದೆಹಲಿ: ವಾಯಾಪಡೆಯಲ್ಲಿ ರಫೇಲ್ ಯುದ್ಧ ವಿಮಾನ ಚಲಾಯಿಸಲು ಮಹಿಳೆಗೆ ಅನುಮತಿ ಇದ್ದ ಮೇಲೆ, ಸೇನೆಯ ಜಡ್ಜ್ ಅಡ್ವೋಕೇಟ್ ಜನರಲ್ (ಜೆಎಜಿ) ಹುದ್ದೆಗೆ ಅವರನ್ನು ನೇಮಿಸಲು ಏಕೆ ಕಷ್ಟವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಆಶ್ಚರ್ಯ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ದೀಪಂಕರ್ ದತ್ತ ನೇತೃತ್ವದ ಪೀಠವು, ಈ ಹುದ್ದೆಗಳ ನೇಮಕಾತಿಗೆ ಯಾವುದೇ ಲಿಂಗ ತಾರತಮ್ಯವಿಲ್ಲ ಎಂದು ಹೇಳಿಕೊಂಡಿದ್ದರೂ, ಮಹಿಳೆಯರಿಗೆ ಕಡಿಮೆ ಹುದ್ದೆಗಳನ್ನು ಮೀಸಲಿಟ್ಟಿರುವುದು ಏಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

ಜೆಎಜಿ ಹುದ್ದೆಗಳ (ಭಾರತೀಯ ಸೇನೆ) ನೇಮಕಾತಿಗೆ ಸಂಬಂಧಿಸಿದಂತೆ ಪುರುಷರು ಮತ್ತು ಮಹಿಳೆಯರಿಗೆ ಖಾಲಿ ಹುದ್ದೆಗಳ ಅಸಮಾನ ಹಂಚಿಕೆಯನ್ನು ಪ್ರಶ್ನಿಸಿ ಇಬ್ಬರು ಮಹಿಳೆಯರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಪೀಠ ತೀರ್ಪನ್ನು ಕಾಯ್ದಿರಿಸಿತು.

ಅರ್ಷನೂರ್ ಕೌರ್ ಮತ್ತು ಇನ್ನೊಬ್ಬರು ಸಲ್ಲಿಸಿರುವ ಅರ್ಜಿಯಲ್ಲಿ, ‘ನಾವು 4 ಮತ್ತು 5ನೇ ರ್ಯಾಂಕ್ನಲ್ಲಿನ ಹುದ್ದೆ ಮತ್ತು ಪುರುಷರಿಗಿಂತ ಹೆಚ್ಚಿನ ಮೆರಿಟ್ ಹೊಂದಿದ್ದರೂ ಈ ಹುದ್ದೆಗಳಿಗೆ ಆಯ್ಕೆಯಾಗಿಲ್ಲ. ಮಹಿಳೆಯರಿಗೆ ಈ ಹುದ್ದೆಗಳು ಕಡಿಮೆ ಸಂಖ್ಯೆಯಲ್ಲಿ ಇರುವ ಕಾರಣ ನಮ್ಮ ಆಯ್ಕೆಯಾಗಿಲ್ಲ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.