ಚೆನ್ನೈ:ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್ (ಐಐಟಿ–ಎಂ) ಸಂಶೋಧಕರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣ ಅಭಿವೃದ್ಧಿಪಡಿಸಿದ್ದು, ಅದನ್ನು ಪ್ರಾಯೋಗಿಕ ಪರೀಕ್ಷೆಗಾಗಿತೂತುಕುಡಿ ಕರಾವಳಿಯಲ್ಲಿ ನವೆಂಬರ್ ಎರಡನೇ ವಾರದಲ್ಲಿ ಅಳವಡಿಸಿದ್ದಾರೆ.

ಸಾಗರದ ಅಲೆಗಳನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣಕ್ಕೆ‘ಸಿಂಧುಜಾ-ಐ’ ಎಂಬ ಹೆಸರಿಡಲಾಗಿದೆ. ತಮಿಳುನಾಡಿನ ತೂತುಕುಡಿ ಕರಾವಳಿಯ ಸುಮಾರು 6 ಕೀ.ಮೀ. ದೂರದಲ್ಲಿ ಸಾಗರ 20 ಮೀಟರ್ ಆಳ ಹೊಂದಿರುವ ಸ್ಥಳದಲ್ಲಿ ‘ಸಿಂಧುಜಾ–ಐ’ ಉಪಕರಣವನ್ನುಸಂಶೋಧಕರು ಪ್ರಾಯೋಗಿಕ ಪರೀಕ್ಷೆಗಾಗಿ ಅಳವಡಿಸಿದ್ದಾರೆ.ಮುಂದಿನ ಮೂರು ವರ್ಷಗಳಲ್ಲಿ ಸಾಗರ ಅಲೆಗಳಿಂದ ಒಂದು ಮೆಗಾವಾಟ್ ವಿದ್ಯುತ್ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಂಶೋಧಕರು ಹೊಂದಿದ್ದಾರೆ.

ಐಐಟಿ–ಎಂ ಪ್ರಾಧ್ಯಾಪಕ ಪ್ರೊ. ಅಬ್ದಸ್ ಸಮದ್ ಅವರ ನೇತೃತ್ವದ ಸಂಶೋಧಕರ ತಂಡವು ಈ ಉಪಕರಣ ಅಭಿವೃದ್ಧಿಪಡಿಸಲು ಒಂದು ದಶಕದಿಂದ ಶ್ರಮಿಸುತ್ತಿದೆ.ಈ ಯೋಜನೆಗೆ ಐಐಟಿ–ಎಂನ‘ಇನ್ನೋವೇಟಿವ್ ರಿಸರ್ಚ್ ಪ್ರಾಜೆಕ್ಟ್ ’ ಡಿಎಸ್ಟಿ ನಿಧಿ- ಪ್ರಯಾಸ್ ಯೋಜನೆಯ ಅಡಿಯಲ್ಲಿ ಟಿಬಿಐ-ಕೆಐಇಟಿ, ಆಸ್ಟ್ರೇಲಿಯಾ ಸರ್ಕಾರದ ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ, ಆಸ್ಟ್ರೇಲಿಯಾಹಳೆಯ ವಿದ್ಯಾರ್ಥಿಗಳ ಅನುದಾನ ಯೋಜನೆ 2022 ಮೂಲಕ ಧನಸಹಾಯ ಲಭಿಸಿದೆ.

‘ದೇಶವು 7,500 ಕಿ.ಮೀ ಉದ್ದದ ಕರಾವಳಿ ಹೊಂದಿದೆ. 54 ಗಿಗಾ ವಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ದೇಶದ ಶಕ್ತಿಯ ಅಗತ್ಯವನ್ನು ಗಣನೀಯ ಪ್ರಮಾಣದಲ್ಲಿ ಪೂರೈಸುತ್ತದೆ.ಇದು 2030ರ ವೇಳೆಗೆ ಹವಾಮಾನ ಬದಲಾವಣೆ ಸಂಬಂಧ ನವೀಕರಿಸಬಹುದಾದ ಇಂಧನ ಮೂಲದಿಂದ 500 ಗಿಗಾ ವಾಟ್ ವಿದ್ಯುತ್ ಉತ್ಪಾದಿಸುವ ಗುರಿಗಳನ್ನು ಸಾಧಿಸಲು ದೇಶಕ್ಕೆ ನೆರವಾಗಲಿದೆ’ ಎನ್ನುವುದುಸಮದ್ ಅನಿಸಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.