ಚೆನ್ನೈ: ಭ್ರೂಣದ ಮಿದುಳಿನ ಅತ್ಯಂತ ವಿವರವಾದ 3ಡಿ ಹೈ-ರೆಸಲೂಶನ್ ಚಿತ್ರಗಳನ್ನು ಬಿಡುಗಡೆ ಮಾಡಿರುವುದಾಗಿ ಚೆನ್ನೈನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಮದ್ರಾಸ್) ಮಂಗಳವಾರ ಹೇಳಿದೆ.

ಸಂಸ್ಥೆಯ ‘ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್’ ಅಭಿವೃದ್ಧಿಪಡಿಸಿದ ಬ್ರೈನ್ ಮ್ಯಾಪಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಮಿದುಳಿನ ಭಾಗಗಳ 5,132 ಡಿಜಿಟಲ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ‘ಭ್ರೂಣದ ಮಿದುಳಿನ ಚಿತ್ರವನ್ನು ಇಷ್ಟೊಂದು ನಿಖರವಾಗಿ ಸೆರೆಹಿಡಿದಿರುವ ವಿಶ್ವದ ಮೊದಲ ಸಂಸ್ಥೆ ನಮ್ಮದು’ ಎಂದು ಪ್ರಕಟಣೆ ತಿಳಿಸಿದೆ.

‘ಐಐಟಿ ಮದ್ರಾಸ್ನ ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್ನ ಈ ಸಾಧನೆಯು ಬ್ರೈನ್ ಮ್ಯಾಪಿಂಗ್ ತಂತ್ರಜ್ಞಾನದಲ್ಲಿ ಹೊಸ ಅವಕಾಶದ ಬಾಗಿಲು ತೆರೆದಿದೆ ಮತ್ತು ಭಾರತವನ್ನು ಬ್ರೈನ್ ಮ್ಯಾಪಿಂಗ್ ವಿಜ್ಞಾನದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿ ನಿಲ್ಲಿಸಿದೆ. ಏಕೆಂದರೆ, ಬೇರೆ ದೇಶಗಳಲ್ಲಿ ಇಂತಹ ಕೆಲಸ ಇದುವರೆಗೆ ನಡೆದಿಲ್ಲ’ ಎಂದಿದೆ.

ಈ ಸಂಶೋಧನೆಗೆ ಸಂಬಂಧಿಸಿದ ವಿವರಗಳು ‘ಧರಣಿ’ ಎಂಬ ಹೆಸರಿನಲ್ಲಿ https://brainportal.humanbrain.in/publicview/index.html ನಲ್ಲಿ ಲಭ್ಯವಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.