ಸಂಭಲ್ (ಉತ್ತರ ಪ್ರದೇಶ): ಸಂಭಲ್ ಜಿಲ್ಲೆಯ ಚಂದೌಸಿ ಪ್ರದೇಶದ ಮಸೀದಿಯೊಂದರಲ್ಲಿ ಆಜಾನ್ ಕೂಗಲು ನಿಗದಿತ ಮಿತಿಗಿಂತ ಹೆಚ್ಚಿನ ಡೆಸಿಬಲ್ನಲ್ಲಿ ಧ್ವನಿವರ್ಧಕ ಬಳಸಿದ ಇಮಾಮ್ ಒಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶನಿವಾರ ರಾತ್ರಿ ಪಂಜಾಬಿಯನ್ ಪ್ರದೇಶದ ಮಸೀದಿಯಲ್ಲಿ ಆಜಾನ್ ಕೂಗಲು ನ್ಯಾಯಾಲಯ ನಿಗದಿಪಡಿಸಿದ ನಿಗದಿತ ಮಿತಿಯನ್ನು ಉಲ್ಲಂಘಿಸಿ ಧ್ವನಿವರ್ಧಕ ಬಳಸಲಾಗಿದೆ.

ಮಸೀದಿಯ ಇಮಾಮ್ ಹಫೀಜ್ ಶಕೀಲ್ ಶಮ್ಸಿ ಎಂಬುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 223 (ಸರ್ಕಾರದ ಆದೇಶ ಉಲ್ಲಂಘನೆ) ಮತ್ತು 270 (ಸಾರ್ವಜನಿಕರಿಗೆ ಕಿರಿಕಿರಿ) ಮತ್ತು ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು – 2000ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ ಧ್ವನಿವರ್ಧಕವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.ಅನುಮತಿ ಇಲ್ಲದೆ ಧ್ವನಿವರ್ಧಕ ಬಳಕೆ: ಮೌಲ್ವಿ ವಿರುದ್ಧ ಪ್ರಕರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.