ಮುಜಾಫರ್ನಗರ: ಮತ್ತೊಂದು ಮದುವೆಗೆ ಯೋಜಿಸಿದ್ದ ಇಲ್ಲಿನ ಹಳ್ಳಿಯೊಂದರ ಇಮಾಮ್ನನ್ನು ಆತನ ಮೊದಲ ಹೆಂಡತಿ ಹೊಡೆದು ಸಾಯಿಸಿದ್ದಾಳೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಶಿಕಾರ್ಪುರ ಗ್ರಾಮದಲ್ಲಿ ಗುರುವಾರ ಸಂಜೆ ಘಟನೆ ನಡೆದಿದೆ. ಭೋರಾ ಖುರ್ದ್ ಗ್ರಾಮದ ಮಸೀದಿಯಲ್ಲಿ ಇಮಾಮ್ ಆಗಿರುವ ಮೌಲ್ವಿ ವಕಿಲ್ ಅಹ್ಮದ್ ಅವರನ್ನು ಪತ್ನಿ ಹಜ್ರಾ ಅವರು ಮರ್ಮಾಂಗಕ್ಕೆ ಹೊಡೆದು ಗಾಯಗೊಳಿಸಿದ್ದು, ಥಳಿಸಿ ಕೊಲೆ ಮಾಡಿದ್ದಾರೆ.

ನನ್ನ ಪತಿ ಮತ್ತೊಂದು ಮದುವೆ ಮಾಡಿಕೊಳ್ಳಲು ಯೋಜಿಸುತ್ತಿದ್ದನು. ಈ ವಿಷಯದ ಬಗ್ಗೆ ನಮ್ಮಿಬ್ಬರ ನಡುವೆ ವಾದ ನಡೆದು ಹಿಂಸಾತ್ಮಕ ರೂಪ ಪಡೆಯಿತು. ಬಳಿಕ, ನಮ್ಮ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾಯಿತು ಎಂದು ಪತ್ನಿ ಪೊಲೀಸರಿಗೆ ತಿಳಿಸಿದ್ದಾಳೆ.

ಪ್ರಕರಣ ಸಂಬಂಧ ಭೋರಕ್ಲಾ ಪೊಲೀಸ್ ಠಾಣೆಯಲ್ಲಿ ಪತ್ನಿ ಹಜ್ರಾ ವಿರುದ್ಧ ಪ್ರಕರಣ ದಾಖಲಾಗಿದ್ದು, ಪತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಠಾಣಾಧಿಕಾರಿ (ಎಸ್ಎಚ್ಒ) ನಿತೇಂದ್ರ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.