ಪೋರ್ಟ್ ಬ್ಲೇರ್: ದಕ್ಷಿಣ ಅಂಡಮಾನ್ನ ತರ್ಮುಗ್ಲಿ ದ್ವೀಪದಲ್ಲಿ ಬುಡಕಟ್ಟು ಜನರಿರುವ ನಿಷೇಧಿತ ಮೀಸಲು ಪ್ರದೇಶಕ್ಕೆ ಭೇಟಿ ನೀಡಿದ ಆರೋಪದ ಮೇಲೆ ಅಮೆರಿಕದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ.

ಮಾರ್ಚ್ 27ರಂದು ಪೋರ್ಟ್ ಬ್ಲೇರ್ಗೆ ಭೇಟಿ ನೀಡಿದ್ದ ಮಿಖೈಲೊ ವಿಕ್ಪೊರ್ವಿಚ್ ಪಾಲಿಯಕೋವ್ನನ್ನು (24) ಮಾರ್ಚ್ 31ರಂದು ಬಂಧಿಸಲಾಗಿದೆ.

‘ನಿಷೇಧಿತ ಪ್ರದೇಶಕ್ಕೆ ಭೇಟಿ ನೀಡುವ ಅವರ ಉದ್ದೇಶದ ಬಗ್ಗೆ ತನಿಖೆ ನಡೆದಿದೆ. ದ್ವೀಪದಲ್ಲಿ ಎಲ್ಲೆಲ್ಲಿಗೆ ಭೇಟಿ ನೀಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ. 2024ರಲ್ಲಿ ಎರಡು ಬಾರಿ ದ್ವೀಪ ಸಮೂಹಕ್ಕೆ ಭೇಟಿ ನೀಡಿದ್ದಾರೆ ಎಂಬುದು ಗೊತ್ತಾಗಿದೆ’ ಎಂದು ಡಿಜಿಪಿ ಎಚ್.ಎಸ್. ಧಾಲೀವಾಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.