The @DRDO_India has successfully conducted the maiden flight Tests of Integrated Air Defence Weapon System (IADWS), on 23 Aug 2025 at around 1230 Hrs off the coast of Odisha.
IADWS is a multi-layered air defence system comprising of all indigenous Quick Reaction Surface to Air… pic.twitter.com/TCfTJ4SfSS
ಈ ಪರೀಕ್ಷೆ ವೇಳೆ ಮೂರು ವಿಭಿನ್ನ ಗುರಿಗಳನ್ನು ಸಮಗ್ರ ವಾಯು ಪ್ರದೇಶ ರಕ್ಷಣಾ ವ್ಯವಸ್ಥೆ ನಾಶ ಪಡಿಸಿದೆ. ಎರಡು ಅತಿ ವೇಗವಾಗಿ ಚಲಿಸುತ್ತಿದ್ದ ಮಾನವರಹಿತ ವೈಮಾನಿಕ ವಾಹನಗಳು (ಯುಎವಿ) ಹಾಗೂ ಮಲ್ಟಿಕಾಪ್ಟರ್ ಡ್ರೋನ್ ಗುರಿಗಳಾಗಿದ್ದವು. ಬೇರೆ ಬೇರೆ ಎತ್ತರದಲ್ಲಿ ಹಾರಾಡುತ್ತಿದ್ದ ಈ ಗುರಿಗಳನ್ನು ಕ್ಯೂಆರ್‌ಎಸ್‌ಎಎಂ ವಿಶಾರ್ಡ್ಸ್ ಮತ್ತು ಡಿಇಡಬ್ಲು ಕರಾರುವಾಕ್ಕಾಗಿ ಹೊಡೆದುರುಳಿಸಿದವು. ಈ ರಕ್ಷಣಾ ವ್ಯವಸ್ಥೆಯ ಎಲ್ಲ ಭಾಗಗಳು ಯಾವುದೇ ದೋಷಗಳಿಲ್ಲದೆಯೇ ಕಾರ್ಯನಿರ್ವಹಿಸಿದವು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.