ನವದೆಹಲಿ: ಇಂಡಿಯಾವನ್ನು ಭಾರತ ಅಥವಾ ಹಿಂದೂಸ್ತಾನ ಎಂದು ಮರುನಾಮಕರಣ ಮಾಡುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಬುಧವಾರ ನಿರಾಕರಿಸಿದೆ. ಆದರೆ, ಈ ಅರ್ಜಿಯನ್ನು ಕೇಂದ್ರ ಸರ್ಕಾರಕ್ಕೆ ಪ್ರಾತಿನಿಧ್ಯವಾಗಿ ಕಳುಹಿಸಬಹುದು ಎಂದು ಹೇಳಿದೆ.

‘ನಾವು ಮರುನಾಮಕರಣ ಮಾಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಈಗಾಗಲೇ ಭಾರತ ಎಂದು ನಮೂದಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ, ನ್ಯಾಯಮೂರ್ತಿ ಎ.ಎಸ್. ಬೊಪ್ಪಣ್ಣ ಹಾಗೂ ರಿಷಿಕೇಷ್ ರಾಯ್ ತ್ರಿಸದಸ್ಯ ಪೀಠ ಹೇಳಿದೆ. ‘ನೀವು ಯಾಕೆ ನ್ಯಾಯಾಲಯಕ್ಕೆ ಈ ವಿಷಯವನ್ನು ತಂದಿರಿ’ ಎಂದು ಅರ್ಜಿದಾರಿಗೆ ನ್ಯಾಯಾಲಯ ಕೇಳಿತು.

ಮರುನಾಮಕರಣದ ಕುರಿತು, ಸಂವಿಧಾನದ ಮೊದಲ ಆರ್ಕಿಕಲ್‌ಗೆ ತಿದ್ದುಪಡಿ ತರಬೇಕು ಎಂದು ಕೋರಿ ಅರ್ಜಿದಾರ ನಮ್ಹ ಅವರ ವಕೀಲ ಅಶ್ವಿನ್ ವೈಶ್ ಕೋರಿದರು.

ಸಂವಿಧಾನ ಸಭೆ ಚರ್ಚೆ ವೇಳೆಯಲ್ಲೂ ಇಂಡಿಯಾ ಪದವನ್ನು ಬಳಸಿರಲಿಲ್ಲ. ಇಂಡಿಯಾ ಹೆಸರು ಗ್ರೀಕ್‌ನ ‘ಇಂಡಿಕಾ’ ಪದದಿಂದ ತೆಗೆದುಕೊಳ್ಳಲಾಗಿದೆ. ಈ ಹೆಸರು ಈ ದೇಶದಲ್ಲಿ ಹೆಟ್ಟಿದ್ದಲ್ಲ.ಜತೆಗೆ, ಇತಿಹಾಸದ ತುಂಬೆಲ್ಲಾ ‘ಭಾರತ ಮಾತಾಕಿ ಜೈ’ ಎಂದೇ ಉಪಯೋಗಿಸಲಾಗಿದೆ ಎಂದು ವಕೀಲ ಅಶ್ವಿನ್ ವಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.