ನವದೆಹಲಿ: ಅಫ್ಗಾನಿಸ್ತಾನದಲ್ಲಿನಭದ್ರತೆಗೆ ಸಂಬಂಧಿಸಿದ ಸನ್ನಿವೇಶಗಳನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ (ಯುಎನ್‌ಎಸ್‌ಸಿ) ಅಫ್ಗಾನಿಸ್ತಾನ ಬಗೆಗಿನ ತನ್ನ ನಿಲುವು ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳಲಿದೆಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.

ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು, ಮಕ್ಕಳ ರಕ್ಷಣೆ ಸೇರಿದಂತೆ ಶಾಂತಿಯುತ, ಪ್ರಜಾಪ್ರಭುತ್ವ ಮತ್ತು ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿರುವ ಅಫ್ಗಾನಿಸ್ತಾನ ಸರ್ಕಾರ ಮತ್ತು ಅಲ್ಲಿನ ಜನರಿಗೆ ಭಾರತ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.

ʼಬಲವಾದ ಅಭಿವೃದ್ಧಿಯ ಪಾಲುದಾರಿಕೆಯನ್ನು ಒಳಗೊಂಡಂತೆ ನಮ್ಮ ಸಂಬಂಧವು ವಿವಿಧಸಂಬಂಧವು ಅಂಶಗಳನ್ನು ಒಳಗೊಂಡಿದೆ.ಉಭಯ ದೇಶಗಳು 2011ರಲ್ಲಿ ಮಾಡಿಕೊಂಡಿರುವ ಒಪ್ಪಂದವು ದ್ವಿಪಕ್ಷೀಯ ಸಂಬಂಧವನ್ನು ಮುನ್ನಡೆಸುತ್ತದೆʼ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ,ಭಾರತವುಅಫ್ಗಾನ್ ಒಡೆತನದ, ಅಫ್ಗಾನ್ ನೇತೃತ್ವದ ಮತ್ತುಅಫ್ಗಾನ್ ನಿಯಂತ್ರಿತ ಶಾಂತಿ ಪ್ರಕ್ರಿಯೆಯನ್ನುಬೆಂಬಲಿಸುವುದನ್ನು ಮುಂದುವರಿಸುತ್ತದೆ ಎಂದೂ ಹೇಳಿದ್ದಾರೆ.

ʼಅಫ್ಗಾನಿಸ್ತಾನದಲ್ಲಿಉಲ್ಬಣಿಸುತ್ತಿರುವ ಭದ್ರತೆಯ ಸಂದಿಗ್ಧತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.ತಕ್ಷಣವೇ ಕದನ ವಿರಾಮ ಘೋಷಿಸುವಂತೆ ನಾವು ಕರೆ ನೀಡುತ್ತೇವೆʼ ಎಂದಿದ್ದಾರೆ.

ತಾಲಿಬಾನ್‌ನಿಂದ ಸೃಷ್ಟಿಸುತ್ತಿರುವ ಹಿಂಸಾಚಾರದ ಬಗ್ಗೆ ಚರ್ಚಿಸಲು ಭಾರತದ ಅಧ್ಯಕ್ಷತೆಯಲ್ಲಿ ಯುಎನ್‌ಎಸ್‌ಸಿ ಶುಕ್ರವಾರ ಸಭೆ ನಡೆಸಲಿದೆ.

ʼಯುಎನ್ ಭದ್ರತಾ ಮಂಡಳಿ ಸಭೆಯಲ್ಲಿ ನಾಳೆ ಅಫ್ಗಾನಿಸ್ತಾನದ ಸಮಸ್ಯೆಯನ್ನು ಚರ್ಚಿಸಲಾಗುವುದು. ನಾಳಿನ ಚರ್ಚೆವೇಳೆ,ಅಫ್ಗಾನಿಸ್ತಾನ ಬಗೆಗಿನನಮ್ಮ ನಿಲುವು ಮತ್ತು ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದೇವೆ.ನಾವು ಈಪ್ರಮುಖ ವಿಷಯದ ಕುರಿತುಮಹತ್ವದ ನಿರ್ಧಾರವನ್ನು ಎದುರು ನೋಡುತ್ತಿದ್ದೇವೆʼ ಎಂದು ಹೇಳಿದ್ದಾರೆ.

ತಾಲಿಬಾನ್ ಸಂಘಟನೆಯು ಅಫ್ಗಾನಿಸ್ತಾನದಲ್ಲಿ ನಾಗರಿಕರು ಮತ್ತು ಸೇನಾ ಪಡೆಗಳನ್ನು ಗುರಿಯಾಗಿರಿಸಿ ಕೆಲವು ವಾರಗಳಿಂದ ದಾಳಿ ನಡೆಸುತ್ತಿದೆ.

ಇವನ್ನೂ ಓದಿ
*ಆಳ–ಅಗಲ: ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಕರಿನೆರಳು
*ಅಫ್ಗಾನಿಸ್ತಾನ ಅಧ್ಯಕ್ಷರ ನಿವಾಸದ ಬಳಿ ರಾಕೆಟ್ ದಾಳಿ
*‘ಆತ ಭಾವನಾತ್ಮಕ ವ್ಯಕ್ತಿ’: ಫೋಟೊ ಜರ್ನಲಿಸ್ಟ್ ಡ್ಯಾನಿಷ್ರನ್ನು ಕೊಂಡಾಡಿದ ತಂದೆ
*ಇಸ್ಲಾಮಾಬಾದ್ನಲ್ಲಿ ಅಫ್ಘನ್ ರಾಯಭಾರಿ ಮಗಳ ಅಪಹರಣ, ಚಿತ್ರಹಿಂಸೆ: ಆರೋಪ
*15 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು, ವಿಧವೆಯರ ಪಟ್ಟಿ ಕೇಳಿದ ತಾಲಿಬಾನ್!
*ತಾಲಿಬಾನ್ ಹೋರಾಟ ಯಾರಿಗಾಗಿ? ಅಫ್ಗಾನಿಸ್ತಾನ ಹಾಳಾದರೆ ಲಾಭ ಯಾರಿಗೆ?: ಅಶ್ರಫ್ ಘನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.