ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸ್ತುತ ಆರ್ಥಿಕ ವರ್ಷದಲ್ಲಿ 41 ಸಾವಿರ ಪೇಟೆಂಟ್ ನೀಡಿದ ಭಾರತ: ಪಿಯೂಷ್ ಗೋಯಲ್

Published 17 ನವೆಂಬರ್ 2023, 6:38 IST
Last Updated 17 ನವೆಂಬರ್ 2023, 6:38 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಪೇಟೆಂಟ್ ಕಚೇರಿ ಈ ಆರ್ಥಿಕ ವರ್ಷದಲ್ಲಿ ನವೆಂಬರ್‌ 15ರ ವರೆಗೆ ಬರೋಬ್ಬರಿ 41,010 ಪೇಟೆಂಟ್‌ಗಳನ್ನು ನೀಡಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಗೋಯಲ್‌, 'ಇದು ದಾಖಲೆ. 2023-24ರಲ್ಲಿ ಇದುವರೆಗೆ ಗರಿಷ್ಠ ಸಂಖ್ಯೆಯ ಪೇಟೆಂಟ್‌ಗಳನ್ನು ನೀಡಲಾಗಿದೆ' ಎಂದು ತಿಳಿಸಿದ್ದಾರೆ.

2013–14ರ ಆರ್ಥಿಕ ವರ್ಷದಲ್ಲಿ 4,227 ಪೇಟೆಂಟ್‌ಗಳನ್ನು ನೀಡಲಾಗಿತ್ತು ಎಂದೂ ಉಲ್ಲೇಖಿಸಿದ್ದಾರೆ.

'ಇದೊಂದು ಗಮನಾರ್ಹ ಸಾಧನೆ' ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ ವರದಿ ಪ್ರಕಾರ, ಪೇಟೆಂಟ್‌ಗಾಗಿ ಭಾರತೀಯರು ಸಲ್ಲಿಸುವ ಅರ್ಜಿಗಳ ಪ್ರಮಾಣ 2022ರಲ್ಲಿ ಶೇ 31.6ರಷ್ಟು ಏರಿಕೆಯಾಗಿದೆ. ಇದು ಕಳೆದ 11 ವರ್ಷಗಳಲ್ಲಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸುವ ಅಗ್ರ ಹತ್ತು ರಾಷ್ಟ್ರಗಳಿಗಿಂತ ಸಾಟಿಯಿಲ್ಲದ ಪ್ರಮಾಣದಲ್ಲಿ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT