ನವದೆಹಲಿ: ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ‘ಮತ ಕಳ್ಳತನ’ (ವೋಟ್ ಚೋರಿ) ಎಂದು ಕರೆಯಲು ‘ಇಂಡಿಯಾ’ ಒಕ್ಕೂಟವು ಗುರುವಾರ ನಿರ್ಧರಿಸಿದೆ. ಈ ಮೂಲಕ ಸಂಸತ್ತಿನ ಒಳಗೆ ಮತ್ತು ಹೊರಗೆ ಈ ಕುರಿತ ಪ್ರತಿಭಟನೆಯನ್ನು ತೀವ್ರಗೊಳಿಸಲು ವಿಪಕ್ಷಗಳು ಸಜ್ಜಾಗಿವೆ.

ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮುಂದಿನ ಮಂಗಳವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಆನಂತರ ಬಿಹಾರದಲ್ಲಿ ‘ಮತ ಕಳ್ಳತನ’ದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಮುಂದಿನ ವಾರ ಚುನಾವಣಾ ಆಯೋಗದ ಹೊರಗೆ ಧರಣಿ ಅಥವಾ ಘೇರಾವ್ ನಡೆಸುವ ಬಗ್ಗೆಯೂ ವಿರೋಧ ಪಕ್ಷಗಳು ಚಿಂತನೆ ನಡೆಸುತ್ತಿವೆ.

ರಾಜ್ಯಸಭೆಯ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶೀಘ್ರವೇ ‘ಇಂಡಿಯಾ’ ಸದಸ್ಯರಿಗಾಗಿ ಭೋಜನಕೂಟ ಕರೆದಿದ್ದು, ಅಲ್ಲಿ ರಾಹುಲ್ ಗಾಂಧಿ ಅವರು ಎಸ್ಐಆರ್ ಬಗ್ಗೆ ವಿವರಣೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಎಎಪಿಯು ಇಂಡಿಯಾ ಒಕ್ಕೂಟದಿಂದ ಹೊರಗಿದ್ದರೂ ಎಸ್ಐಆರ್ ವಿರೋಧಿಸಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.

‘ಆಪರೇಷನ್ ಸಿಂಧೂರ ಕುರಿತ ಚರ್ಚೆಯ ನಂತರ ಎಸ್ಐಆರ್ ಬಗ್ಗೆ ಚರ್ಚೆ ನಡೆಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ನಂತರ ಅದು ತನ್ನ ಮಾತಿನ ಮೇಲೆ ಬದ್ಧತೆ ತೋರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ಖರ್ಗೆ ನೇತೃತ್ವದಲ್ಲಿ ಗುರುವಾರ ನಡೆದ ‘ಇಂಡಿಯಾ’ ಸಂಸದೀಯ ನಾಯಕರ ಸಭೆಯಲ್ಲಿ ಎಸ್ಐಆರ್ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ರಾಹುಲ್ ಗಾಂಧಿ, ಟಿಎಂಸಿಯ ಡೆರೆಕ್ ಒಬ್ರಯಾನ್ , ಸಿಪಿಎಂನ ಕೆ.ರಾಧಾಕೃಷ್ಣನ್ ಮತ್ತಿತರರು ಭಾಗಿಯಾಗಿದ್ದರು. ಎಸ್ಐಆರ್ ವಿಚಾರವನ್ನೇ ಪ್ರಧಾನವಾಗಿ ಇಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಬೇಕೆಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಿಂದ ಅಮೆರಿಕಕ್ಕೆ ಆಮದಾಗುವ ಎಲ್ಲ ಸರಕುಗಳ ಮೇಲೆ 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಘೋಷಿಸಿರುವ ಬಗ್ಗೆಯೂ ಧ್ವನಿ ಎತ್ತಬೇಕೆಂದು ಎಡ ಪಕ್ಷಗಳು ಪ್ರತ್ಯೇಕ ಸಭೆ ನಡೆಸಿವೆ.

ಮೇಲ್ಮನೆ ಕೆಳಮನೆಯಲ್ಲಿ ಮುಂದುವರಿದ ಪ್ರತಿಭಟನೆ

ಬಿಹಾರದಲ್ಲಿ ಮತದಾರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರೋಧಿಸಿ ವಿರೋಧ ಪಕ್ಷಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಗುರುವಾರವೂ ಪ್ರತಿಭಟನೆ ನಡೆಸಿದವು. ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ ಕಾರಣ ಬೆಳಗಿನ ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು. ಎಸ್ಐಆರ್ ಕುರಿತ ಚರ್ಚೆಗೆ ದಿನಾಂಕ ನಿಗದಿ ಮಾಡುವಂತೆ ವಿಪಕ್ಷಗಳ ಸಂಸದರು ಪಟ್ಟುಹಿಡಿದರು. ‘ಎಸ್ಐಆರ್ ಎಂದು ಕರೆಯುವುದು ಸೂಕ್ತವಲ್ಲ ‘ಮತ ಕಳ್ಳತನ’ ಎಂದೇ ಕರೆಯಬೇಕು’ ಎಂದು ಇಂಡಿಯಾ ಒಕ್ಕೂಟದ ನಾಯಕರೊಬ್ಬರು ಹೇಳಿದರು. ಇತರ ಭಾಷೆಗಳಲ್ಲಿ ‘ಮತ ಕಳ್ಳತನ’ಕ್ಕೆ ಸೂಕ್ತವಾದ ಪದವನ್ನು ಹುಡುಕಲು ವಿಪಕ್ಷಗಳ ನಾಯಕರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.