ಅಹಮದಾಬಾದ್(ಪಿಟಿಐ): ದೇಶದಲ್ಲಿ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ನಡೆಯುವ ಹಿಂಸಾಚಾರ ಪ್ರಕರಣಗಳಲ್ಲಿ ಸರ್ಕಾರವೇ ಹೊಣೆ ಹೊತ್ತಿರುವುದು ವಿರಳ. ಇಂತಹ ಹಿಂಸಾಚಾರಗಳಲ್ಲಿಬದುಕುಳಿದವರು ಮತ್ತು ಇವರನ್ನು ಬೆಂಬಲಿಸುವ ನಾಗರಿಕರು ಪ್ರತಿಕೂಲ ಪರಿಣಾಮ ಎದುರಿಸಬೇಕಾಗಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಹೇಳಿದ್ದಾರೆ.

ಭಾನುವಾರ ಇಲ್ಲಿನಡೆದ ಗಿರೀಶ್ ಪಟೇಲ್ ಸ್ಮರಣಾಂಜಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ ಹಿಂಸಾಚಾರದ ಕಥೆ ಶುರುವಾಗುವುದೇದ್ವೇಷದ ಭಾಷಣಗಳು ಮತ್ತು ದ್ವೇಷದ ಬರಹಗಳೊಂದಿಗೆ ಎಂದರು.

ಹಿಂಸಾಚಾರದಲ್ಲಿ ಬದುಕುಳಿದವರು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ನಾನಾ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. 1984 (ಸಿಖ್ ದಂಗೆ), 1992 (ಬಾಬರಿ ಮಸೀದಿ ಧ್ವಂಸ) ಮತ್ತು 2002ರ ಗುಜರಾತ್ ಗಲಭೆಯಲ್ಲಿ ಎಷ್ಟು ಜನರಿಗೆ ಶಿಕ್ಷೆಯಾಗಿದೆ? ಇವು ನಮ್ಮ ಮುಂದಿರುವ ಪ್ರಶ್ನೆಗಳು ಎಂದರು.

ಹಿಂಸಾಚಾರ ಮತ್ತು ಅಧಿಕಾರದಲ್ಲಿರುವ ಪಕ್ಷವು ಹಿಂಸಾಚಾರಕ್ಕೆ ತನ್ನ ಬೆಂಬಲ ನೀಡುತ್ತಿರುವ ಪ್ರಕ್ರಿಯೆಗೆ ದೇಶ ಸಾಕ್ಷಿಯಾಗುತ್ತಿದೆ. ಇದಕ್ಕೆ ಹಳೆಯ ಇತಿಹಾಸವೂ ಇದೆ ಎಂದರು.

ಮಹಾತ್ಮ ಗಾಂಧಿ ಕುರಿತು ಮಾತನಾಡಿದ ಅವರು, ಸ್ವಾತಂತ್ರ್ಯ ನಂತರದ ಇತಿಹಾಸ ಪುನಃ ಬರೆಯುವ ಮೊದಲ ಪ್ರಯತ್ನವೆಂದರೆ ಗಾಂಧೀಜಿಯ ಹತ್ಯೆಗೆ ಸಂಬಂಧಿಸಿದ್ದಾಗಿರಲಿದೆ. ದಲಿತ ಮತ್ತು ಹರಿಜನರ ಮೇಲಿನ ದೌರ್ಜನ್ಯಕ್ಕೆ ಪಶ್ಚಾತ್ತಾಪ ಪಡುವಂತೆ ಮತ್ತು ಭಾರತವನ್ನು ಜಾತ್ಯತೀತ ದೇಶವೆಂದು ಕರೆಯುವಂತೆಸನಾತನ ಹಿಂದೂ ಧರ್ಮವನ್ನು ಒತ್ತಾಯಿಸಿ ಮಾಡಿದ ಭಾಷಣವೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು ಎಂದರು.

ದೇಶದಲ್ಲಿ ಜೈಲುಗಳ ಸುಧಾರಣೆ, ಜೈಲುಗಳ ಮೇಲ್ವಿಚಾರಣೆ ಹಾಗೂ ಜಾಮೀನು ನ್ಯಾಯಾಲಯಗಳ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ ಎಂದು ತೀಸ್ತಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.