ನವದೆಹಲಿ: ಚೀನಾವು ನೈಜ ನಿಯಂತ್ರಣ ರೇಖೆಯಾದ್ಯಂತ (ಎಲ್‌ಎಸಿ) ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸುತ್ತಿದ್ದು, ಶಸ್ತ್ರಾಸ್ತ್ರಗಳ ಜಮಾವಣೆ ಮುಂದುವರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಕ್ರಮ ಕೈಗೊಳ್ಳುತ್ತಿದೆಯಷ್ಟೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

‘ಭಾರತೀಯ ಸೇನೆಯು ಎಲ್‌ಎಸಿಯಲ್ಲಿ ಮುನ್ನುಗ್ಗುವ ನೀತಿ ಅನುಸರಿಸುತ್ತಿದೆ. ನಮ್ಮ ಭೂಭಾಗವನ್ನು ಅತಿಕ್ರಮಿಸಿಕೊಳ್ಳುತ್ತಿದೆ’ ಎಂಬ ಚೀನಾದ ಆರೋಪವನ್ನು ಸಚಿವಾಲಯ ತಳ್ಳಿಹಾಕಿದೆ.

ಓದಿ:ಬೀಜಿಂಗ್ನಲ್ಲಿ ಸಿಲುಕಿರುವ ಭಾರತೀಯರು: ವೀಸಾ ನಿರ್ಬಂಧ ಸಮರ್ಥಿಸಿಕೊಂಡ ಚೀನಾ

‘ಚೀನಾವು ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಯೋಧರ ನಿಯೋಜನೆ ಹೆಚ್ಚಿಸುತ್ತಿರುವುದಲ್ಲದೆ, ಶಸ್ತ್ರಾಸ್ತ್ರಗಳ ಜಮಾವಣೆಯನ್ನೂ ಮಾಡುತ್ತಿದೆ. ಇದಕ್ಕೆ ಪ್ರತಿಯಾಗಿ ನಮ್ಮ ಸೇನೆಯೂ ಯೋಧರ ನಿಯೋಜನೆ ಮಾಡುತ್ತಿದೆ. ಭಾರತದ ಭದ್ರತೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ತಿಳಿಸಿದ್ದಾರೆ.

ಭಾರತೀಯ ಸೇನೆಯು ಗಡಿಯಲ್ಲಿ ಅತಿಕ್ರಮಣಕಾರಿ ವರ್ತನೆ ತೋರುತ್ತಿದೆ ಎಂದು ಬುಧವಾರ ಚೀನಾ ಆರೋಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.