ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಈಗ ‘ವಿಶ್ವ ಮಿತ್ರ’: ನರೇಂದ್ರ ಮೋದಿ

Published 26 ನವೆಂಬರ್ 2023, 10:55 IST
Last Updated 26 ನವೆಂಬರ್ 2023, 10:55 IST
ಅಕ್ಷರ ಗಾತ್ರ

ಹೈದರಾಬಾದ್‌: ಇಡೀ ವಿಶ್ವವೇ ಇಂದು ಭಾರತವನ್ನು ‘ವಿಶ್ವ ಮಿತ್ರ’ ಎಂಬಂತೆ ಕಾಣುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಕಾನ್ಹಾ ಶಾಂತಿ ವನಮ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ಹಿಂದೆ ಯೋಗ ಜ್ಞಾನ ಮತ್ತು ಆಯುರ್ವೇದದ ಪದ್ಧತಿಗಳ ಮೇಲೆ ದಾಳಿಗೆ ತುತ್ತಾಗಿ ಅಪಾರ ನಷ್ಟವನ್ನು ದೇಶ ಅನುಭವಿಸಿದೆ ಎಂದರು.

‘ಇದೀಗ ಕಾಲ ಬದಲಾಗಿದೆ. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ನಮ್ಮ(ಭಾರತೀಯರ) ನಿರ್ಧಾರಗಳು, ಕೆಲಸಗಳು ಮುಂದಿನ ಪೀಳಿಗೆಯ ಭವಿಷ್ಯವನ್ನು ನಿರ್ಧರಿಸುತ್ತದೆ’ ಎಂದು ಹೇಳಿದರು.

‘ಅಭಿವೃದ್ಧಿ ಹೊಂದುತ್ತಿರುವ ಭಾರತವು ಜಗತ್ತಿಗೆ ತಾನು ವಿಶ್ವ ಮಿತ್ರ (ವಿಶ್ವದ ಸ್ನೇಹಿತ) ಎಂಬುದನ್ನು ನೋಡುತ್ತಿದೆ. ಕೊರೊನಾ ನಂತರ ನಾವು ಜಗತ್ತಿನ ಜತೆ ನಿಂತ ರೀತಿ ಇಂದು ಭಾರತವು ತಾನು ನಿಮ್ಮ ಸ್ನೇಹಿತ ಎಂದು ಜಗತ್ತಿಗೆ ಬಿಡಿಸಿ ಹೇಳಬೇಕಾಗಿಲ್ಲ’ ಎಂದು ಮೋದಿ ಹೇಳಿದರು.

2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ರೋಗ ವಿಶ್ವದಾದ್ಯಂತ ವ್ಯಾಪಿಸಿದ ನಂತರ ದೇಶೀಯ ಸಂಸ್ಥೆಗಳು ತಯಾರಿಸಿದ ಕೋವಿಡ್ ಲಸಿಕೆಗಳನ್ನು ಹಲವು ದೇಶಗಳಿಗೆ ವಿತರಿಸಿದ್ದನ್ನು ಮೋದಿ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT