ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾಕ್ಕಿಂತಲೂ ಕೆಳಗಿನ ಸ್ಥಾನಕ್ಕೆ ಕುಸಿದ ಭಾರತ

117 ರಾಷ್ಟ್ರಗಳ ಪಟ್ಟಿಯಲ್ಲಿ 102ನೇ ಸ್ಥಾನದಲ್ಲಿ ಭಾರತ
Last Updated 16 ಅಕ್ಟೋಬರ್ 2019, 5:47 IST
ಅಕ್ಷರ ಗಾತ್ರ

ನವದೆಹಲಿ:‘ಜಾಗತಿಕ ಹಸಿವು ಸೂಚ್ಯಂಕ’ದಲ್ಲಿ (ಹಸಿವಿನಿಂದ ಬಳಲುತ್ತಿರುವವರ ಪ್ರಮಾಣಕ್ಕೆ ಸಂಬಂಧಿಸಿದ್ದು) ಭಾರತ 102ನೇ ಸ್ಥಾನದಲ್ಲಿರುವುದಾಗಿ ವರದಿಯೊಂದು ತಿಳಿಸಿದೆ.

ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿಜರ್ಮನಿಯ ಸ್ವಯಂಸೇವಾ ಸಂಸ್ಥೆ ‘ವೆಲ್‌ತ್ಹಂಗರ್‌ಲೈಫ್’ ಮತ್ತು ಐರ್ಲೆಂಡ್‌ನ ‘ಕನ್ಸರ್ನ್‌ ವಲ್ಡ್‌ವೈಡ್’ ಜಂಟಿಯಾಗಿ ವರದಿ ಸಿದ್ಧಪಡಿಸಿವೆ. ಒಟ್ಟು 117 ರಾಷ್ಟ್ರಗಳನ್ನೊಳಗೊಂಡ ಪಟ್ಟಿ ಇದಾಗಿದೆ.

ಅತಿಹೆಚ್ಚು ಹಸಿವಿನಿಂದ ಬಳಲುತ್ತಿರುವವರಿರುವ 45 ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ವರದಿ ತಿಳಿಸಿದೆ. 2014ರಲ್ಲಿ 77 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 55ನೇ ಸ್ಥಾನದಲ್ಲಿತ್ತು. ಪಾಕಿಸ್ತಾನ 94, ಬಾಂಗ್ಲಾದೇಶ 88 ಮತ್ತು ಶ್ರೀಲಂಕಾ 66ನೇ ಸ್ಥಾನದಲ್ಲಿವೆ.

ಜಾಗತಿಕ, ರಾಷ್ಟ್ರೀಯ ಮತ್ತು ಪ್ರಾದೇಶಕ ಮಟ್ಟದಲ್ಲಿ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣವನ್ನು ಪತ್ತೆಹಚ್ಚಲು ಹಾಗೂ ಸಮಸ್ಯೆಯ ನಿವಾರಣೆ ನಿಟ್ಟಿನಲ್ಲಿ ಆಗುತ್ತಿರುವ ಪ್ರಗತಿ, ಹಿನ್ನಡೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ವಾರ್ಷಿಕ ಸೂಚ್ಯಂಕ ಸಿದ್ಧಪಡಿಸಲಾಗುತ್ತಿದೆ.

‘ಭಾರತದಲ್ಲಿ 6ರಿಂದ 23 ತಿಂಗಳವರೆಗಿನ ವಯಸ್ಸಿನ ಶೇ 9.6ರಷ್ಟು ಶಿಶುಗಳಿಗೆ ಕನಿಷ್ಠ ಆಹಾರ ನೀಡಲಾಗುತ್ತಿದೆ. 2015–16ರ ಹೊತ್ತಿಗೆ, ಭಾರತದ ಶೇ 90ರಷ್ಟು ಮನೆಗಳು ಸುಧಾರಿತ ಕುಡಿಯುವ ನೀರಿನ ಲಭ್ಯತೆ ಹೊಂದಿವೆ. ಆದರೆ, ಶೇ 39ರಷ್ಟು ಮನೆಗಳಿಗೆ ಶೌಚಾಲಯ ಸೌಲಭ್ಯ ಹೊಂದಿರಲಿಲ್ಲ (ಐಐಪಿಎಸ್ ಮತ್ತು ಐಸಿಎಫ್ 2017)’ ಎಂದು ವರದಿ ಹೇಳಿದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT