ಬಾಲಸೋರ್ (ಒಡಿಶಾ): ದೇಶಿಯವಾಗಿ ಅಭಿವೃದ್ಧಿಪಡಿಸಿದ ಮಾನವ ರಹಿತ 'ಸ್ಕ್ರಾಮ್‌ಜೆಟ್' ರಾಕೆಟ್ ಪರೀಕ್ಷೆಯನ್ನುಬುಧವಾರ ಮೊದಲ ಬಾರಿ ಯಶಸ್ವಿಯಾಗಿ ಕೈಗೊಳ್ಳಲಾಯಿತು.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಪರೀಕ್ಷೆಯನ್ನು ಬೆಂಗಾಲ ಕೊಲ್ಲಿಯ ಡಾ. ಅಬ್ದುಲ್ ಕಲಾಂ ದ್ವೀಪದಲ್ಲಿ ಬೆಳಿಗ್ಗೆ 11.25ಕ್ಕೆ ನಡೆಸಲಾಯಿತು. ಹೈಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆ ಯೋಜನೆಗೆ ಇದು ಪೂರಕವಾಗಿದೆ.

‘ನೂತನ ತಂತ್ರಜ್ಞಾನದ ಪರೀಕ್ಷೆ ನಡೆಸಲಾಗಿದೆ. ರೇಡಾರ್‌ನಿಂದ ದೊರೆತ ಮಾಹಿತಿ ಅನ್ವಯ ಪ್ರಯೋಗ ಯಶಸ್ವಿಯಾಗಿ ನಡೆದಿದೆ‘ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

ಹೈಪರ್‌ಸಾನಿಕ್ ತಂತ್ರಜ್ಞಾನ ಪ್ರದರ್ಶಕ ವಾಹಕ (ಎಚ್‌ಎಸ್‌ಟಿಡಿವಿ) ವಿಶೇಷ ಯೋಜನೆ ಅಡಿಯಲ್ಲಿ ’ಸ್ಕ್ರಾಮ್‌ಜೆಟ್‘ ಅಭಿವೃದ್ಧಿಪಡಿಸಲಾಗಿತ್ತು. ಹೈಪರ್‌ಸಾನಿಕ್ ಮತ್ತು ದೂರಗಾಮಿ ಕ್ರೂಸ್ ಕ್ಷಿಪಣಿಗಳ ಜತೆಗೆ ಸ್ಕ್ರಾಮ್‌ಜೆಟ್ ಅನ್ನು ವಿವಿಧ ಯೋಜನೆಗಳಿಗೂ ಬಳಸಬಹುದಾಗಿದೆ.

ಮುಖ್ಯವಾಗಿ ಅತಿ ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾವಣೆ ಮಾಡಲು ‘ಸ್ಕ್ರಾಮ್‌ಜೆಟ್‘ ಉಪಯೋಗಿಸಬಹುದು. ಇದು 20 ಸೆಕೆಂಡ್‌ಗಳಲ್ಲಿ 6 ಮ್ಯಾಕ್ ವೇಗದಲ್ಲಿ ಸಾಗುವ ಈ ವಾಹಕ 32.5 ಕಿಲೋ ಮೀಟರ್ ಎತ್ತರ ಕ್ರಮಿಸುತ್ತದೆ.

ಎಚ್‌ಎಸ್‌ಟಿಡಿವಿ ಕ್ರೂಸ್ ವಾಹಕವನ್ನು ರಾಕೆಟ್ ಮೋಟಾರ್‌ದಲ್ಲಿ ಅಳವಡಿಸಲಾಗುತ್ತದೆ. ಇದು ಅಗತ್ಯವಿರುವ ಎತ್ತರಕ್ಕೆ ಕೊಂಡೊಯ್ಯುತ್ತದೆ. ನಿರ್ದಿಷ್ಟ ವೇಗವನ್ನು ಸಾಧಿಸಿದ ಬಳಿಕ ಕ್ರೂಸ್ ವಾಹಕವನ್ನು ಉಡಾವಣೆ ವಾಹಕದಿಂದ ಹೊರಹಾಕಲಾಗುತ್ತದೆ. ಬಳಿಕ, ಸ್ಕ್ರ್ರಾಮ್‌ಜೆಟ್ ಎಂಜಿನ್ ಸ್ವಯಂಚಾಲಿತವಾಗಿ ಚಲಿಸುತ್ತದೆ ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.