ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿ-7, ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಭಾರತ ಭಾಗವಹಿಸಲಿದೆ: ಪ್ರಧಾನಿ ಮೋದಿ

Published 20 ಮೇ 2024, 11:46 IST
Last Updated 20 ಮೇ 2024, 11:46 IST
ಅಕ್ಷರ ಗಾತ್ರ

ಭುವನೇಶ್ವರ: ಜಾಗತಿಕ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯ ಕಾರ್ಯಸೂಚಿಯನ್ನು ಉತ್ತೇಜಿಸುವ ಎಲ್ಲಾ ಪ್ರಮುಖ ಶೃಂಗಸಭೆಗಳಲ್ಲಿ ಭಾರತ ಭಾಗವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಭುವನೇಶ್ವರದಲ್ಲಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಜಿ -7 ಸಭೆ ಮತ್ತು ಉಕ್ರೇನ್ ಶಾಂತಿ ಶೃಂಗಸಭೆಯಲ್ಲಿ ಭಾಗಿಯಾಗಲು ಬಂದಿರುವ ಆಹ್ವಾನಗಳನ್ನು ಉಲ್ಲೇಖಿಸಿ ಅವರು ಮಾತನಾಡಿದರು.

ಮಾನವ ಕೇಂದ್ರಿತ ಅಭಿವೃದ್ಧಿ, ಸಮೃದ್ಧ ಮತ್ತು ಶಾಂತಿಯುತ ಜಗತ್ತನ್ನು ಮುನ್ನಡೆಸಲು ಈ ಶೃಂಗಸಭೆಗಳಲ್ಲಿ ಭಾರತವು ಜಾಗತಿಕ ದಕ್ಷಿಣದ ಧ್ವನಿಯನ್ನು ಪ್ರತಿಧ್ವನಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಇಟಲಿಯಲ್ಲಿ ಜೂನ್ 13ರಿಂದ 15ರವರೆಗೆ ಜಿ-7 ಶೃಂಗಸಭೆ ನಡೆಯಲಿದೆ. ಬಳಿಕ ಸ್ವಿಟ್ಜರ್ಲೆಂಡ್‌ನಲ್ಲಿ ಜೂನ್ 15ರಿಂದ 16ರವರೆಗೆ ಉಕ್ರೇನ್ ಶಾಂತಿ ಶೃಂಗಸಭೆ ನಡೆಯಲಿದೆ.

ಶೃಂಗಸಭೆಗಳಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ನೀಡಲಾದ ಆಹ್ವಾನಗಳು ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಅದರ ಮಹತ್ವ ಮತ್ತು ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಮೋದಿ ಹೇಳಿದರು.

ವಸುಧೈವ ಕುಟುಂಬಕಂ (ಜಗತ್ತೇ ಒಂದು ಕುಟುಂಬ) ಎಂಬ ನಮ್ಮ ತತ್ತ್ವಕ್ಕೆ ಅನುಗುಣವಾಗಿ ನಾವು ಹೊಂದಿರುವ ದೃಢವಾದ ಜಾಗತಿಕ ಬದ್ಧತೆಯನ್ನು ಇವು ಪ್ರತಿಬಿಂಬಿಸುತ್ತವೆ ಎಂದೂ ಪ್ರಧಾನಿ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT