ನವದೆಹಲಿ: ಭಾರತ ಮತ್ತು ಅಮೆರಿಕದ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಮಟ್ಟದ ಸಭೆ ಮಂಗಳವಾರ ನಿಗದಿಯಾಗಿದ್ದು ಇದಕ್ಕೂ ಮುನ್ನ ಉಭಯ ರಾಷ್ಟ್ರಗಳು ದತ್ತಾಂಶ ಒಪ್ಪಂದಕ್ಕೆ ಸಹಿ ಹಾಕಲಿವೆ.

ದ್ವಿಪಕ್ಷೀಯ ಸಂಬಂಧಗಳು ಮತ್ತು ಭದ್ರತಾ ಸಹಕಾರವನ್ನು ಬಲಪಡಿಸುವ ಹಾಗೂ ಪೂರ್ವ ಲಡಾಖ್‌ನಲ್ಲಿ ಗಡಿ ಕ್ಯಾತೆ ತೆಗೆದಿರುವ ನೆರೆಯ ಚೀನಾಕ್ಕೆ ಬಿಸಿ ಮುಟ್ಟಿಸುವ ಬಗ್ಗೆ ಮಂಗಳವಾರ ನಿಗದಿಯಾಗಿರುವ ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರು, ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಜೊತೆ ಚರ್ಚಿಸಲಿದ್ದಾರೆ.

‘ರಾಜನಾಥ್ ಸಿಂಗ್ ಮತ್ತು ಎಸ್ಪರ್ ಅವರು ಸೋಮವಾರ ಉಭಯ ರಾಷ್ಟ್ರಗಳ ನಡುವಣ ಮಿಲಿಟರಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ’ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಪ್ರಕಟಣೆ ತಿಳಿಸಿದೆ.

‘ಮಿತ್ರ ರಾಷ್ಟ್ರಗಳ ನಡುವಣ ಬಾಂಧವ್ಯವು ಎಲ್ಲಾ ಹಂತಗಳಲ್ಲೂ ಪ್ರಗತಿ ಕಂಡಿದೆ’ ಎಂದು ಜೈಶಂಕರ್ ಅವರು ಪಾಂಪಿಯೊ ಜೊತೆಗಿನ ಮಾತುಕತೆಯ ಬಳಿಕ ಟ್ವೀಟ್ ಮಾಡಿದ್ದಾರೆ.

‘ಭಾರತವು ಶಸ್ತ್ರಾಸ್ತ್ರಗಳಿಗಾಗಿರಷ್ಯಾದ ಮೇಲೆ ಅವಲಂಬನೆಯಾಗುವುದನ್ನು ಬಿಟ್ಟು ಅಮೆರಿಕದ ಎಫ್–18 ಜೆಟ್‌ಗಳನ್ನು ಖರೀದಿಸಬೇಕು’ ಎಂದು ಎಸ್ಪರ್ ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.