ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಣ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಬಲಪಡಿಸಲಿದ್ದು, ಹೊಸ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

'ಭಾರತ-ಅಮೆರಿಕ ದೇಶಗಳಿಗೆ ಶುಭ ಸಮಾಚಾರ! ಎರಡು ಮಹಾನ್ ದೇಶಗಳ ಮಧ್ಯಂತರ ವ್ಯಾಪಾರ ಒಪ್ಪಂದದ ಚೌಕಟ್ಟನ್ನು ನಾವು ರೂಪಿಸಿದ್ದೇವೆ. ಉಭಯ ದೇಶಗಳ ನಡುವಣ ಬಾಂಧವ್ಯಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬದ್ಧತೆಗೆ ನಾನು ವೈಯಕ್ತಿಕವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

'ಇದು 'ಮೇಕ್ ಇನ್ ಇಂಡಿಯಾ' ಅನ್ನು ಬಲಪಡಿಸಲಿದ್ದು, ದೇಶದ ಶ್ರಮಿಕ ರೈತರು, ಉದ್ಯಮಿಗಳು, ಎಂಎಸ್ಎಂಇ, ಸ್ಟಾರ್ಟ್ಅಪ್, ಮೀನುಗಾರರು ಸೇರಿದಂತೆ ಇತರರಿಗೆ ಹೊಸ ಅವಕಾಶಗಳನ್ನು ತೆರೆದುಕೊಳ್ಳುತ್ತದೆ. ಇದರಿಂದ ಮಹಿಳೆಯರು ಹಾಗೂ ಯುವಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗವಕಾಶವು ಸೃಷ್ಟಿಯಾಗಲಿವೆ' ಎಂದು ಹೇಳಿದ್ದಾರೆ.

'ನಾವೀನ್ಯತೆಯನ್ನು ಉತ್ತೇಜಿಸಲು ಭಾರತ-ಅಮೆರಿಕ ಬದ್ಧವಾಗಿದೆ. ಈ ಚೌಕಟ್ಟು ಉಭಯ ದೇಶಗಳ ಹೂಡಿಕೆ ಹಾಗೂ ತಂತ್ರಜ್ಞಾನವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ' ಎಂದು ಹೇಳಿದ್ದಾರೆ.

'ಈ ಒಪ್ಪಂದವು ಜಾಗತಿಕ ಬೆಳವಣಿಗೆಗೆ ಕೊಡುಗೆ ನೀಡಲಿವೆ. ವಿಕಸಿತ ಭಾರತ ನಿರ್ಮಾಣದತ್ತ ನಾವು ಮುನ್ನಡೆಯುವಾಗ ಭವಿಷ್ಯದ ಜಾಗತಿಕ ಪಾಲುದಾರಿಕೆಗಳನ್ನು ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ' ಎಂದಿದ್ದಾರೆ.
.ವ್ಯಾಪಾರ ಒಪ್ಪಂದ ಚೌಕಟ್ಟು ಅಂತಿಮ; ಭಾರತದ ಮೇಲಿನ ಸುಂಕ ಶೇ 18ಕ್ಕೆ ಇಳಿಕೆ.India-US Trade Deal: 30 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಪ್ರವೇಶ; ಮುಖ್ಯಾಂಶಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.