ವಾಷಿಂಗ್ಟನ್/ನವದೆಹಲಿ: ಭಾರತ ಮತ್ತು ಅಮೆರಿಕ ಶನಿವಾರ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ರೂಪಿಸಿದ್ದು, ಇದರಂತೆ ಭಾರತದ ಮೇಲಿನ ಸುಂಕ ಶೇ 18ಕ್ಕೆ ಇಳಿಕೆಯಾಗಿದೆ.

ಉಭಯ ದೇಶಗಳಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಮಧ್ಯಂತರ ವ್ಯಾಪಾರ ಒಪ್ಪಂದಕ್ಕೆ ಚೌಕಟ್ಟನ್ನು ರೂಪಿಸಲು ಸಾಧ್ಯವಾಗಿರುವುದು ಸಂತಸದಾಯಕವಾಗಿದೆ ಎಂದು ಉಭಯ ದೇಶಗಳ ಜಂಟಿ ಹೇಳಿಕೆ ತಿಳಿಸಿದೆ.
.ಸಂಪಾದಕೀಯ: ಟ್ರಂಪ್ ಸುಂಕ ಸಮರಕ್ಕೆ ತೆರೆ; ಪ್ರಶ್ನೆ–ಗೊಂದಲಗಳಿಗಿಲ್ಲ ಕೊರೆ.ಮೋದಿ ಜತೆ ದೂರವಾಣಿ ಸಂಭಾಷಣೆ: ವ್ಯಾಪಾರ ಒಪ್ಪಂದ ಅಂತಿಮ ಎಂದ ಟ್ರಂಪ್.
ಒಪ್ಪಂದದಂತೆ ಭಾರತವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಎಲ್ಲ ಕೈಗಾರಿಕಾ ವಸ್ತುಗಳು, ಒಣ ಡಿಸ್ಟಿಲರ್ ಧಾನ್ಯಗಳು, ಕೆಂಪು ಜೋಳ, ಬೀಜ, ತಾಜಾ ಹಾಗೂ ಸಂಸ್ಕರಿಸಿದ ಹಣ್ಣುಗಳು, ಸೋಯಾಬೀನ್ ಎಣ್ಣೆ, ವೈನ್ ಮತ್ತು ಸ್ಪಿರಿಟ್ ಸೇರಿದಂತೆ ವಿವಿಧ ವಸ್ತುಗಳ ಮೇಲಿನ ಸಂಕವನ್ನು ತೆಗೆದು ಹಾಕಲಿದೆ ಅಥವಾ ಕಡಿಮೆ ಮಾಡಲಿವೆ.

ಈ ಒಪ್ಪಂದದ ಪ್ರಕಾರ ಅಮೆರಿಕವು ಭಾರತದ ವಸ್ತುಗಳ ಮೇಲಿನ ಸುಂಕವನ್ನು ಶೇ 18 ಇಳಿಸಿದೆ.

ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಕಳೆದ ವರ್ಷ ಆಗಸ್ಟ್ನಲ್ಲಿ ಭಾರತದ ಮೇಲೆ ಅಮೆರಿಕ ಶೇ 25ರ ಹೊರತಾಗಿ ಹೆಚ್ಚುವರಿಯಾಗಿ ಶೇ 25ರಷ್ಟು ಸುಂಕ ವಿಧಿಸಿತ್ತು.

2025 ಫೆಬ್ರುವರಿ 13ರಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಕತೆಯನ್ನು ಪ್ರಾರಂಭಿಸಿದ ಬಳಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಬದ್ಧತೆಯನ್ನು ಪುನರುಚ್ಚರಿಸಲಾಗಿದೆ.

ಸುಂಕ ಕಡಿತದಿಂದಾಗಿ ಭಾರತದ ಜವಳಿ ಉಡುಪುಗಳು, ಚರ್ಮ, ಪಾದರಕ್ಷೆ, ಪ್ಲಾಸ್ಟಿಕ್, ರಬ್ಬರ್, ಸಾವಯವ ರಾಸಾಯನಿಕ, ಗೃಹಾಲಂಕಾರ, ಕುಶಲಕರ್ಮಿ ಉತ್ಪನ್ನ ಮತ್ತು ಯಂತ್ರೋಪಕರಣಗಳ ರಫ್ತು ಹೆಚ್ಚಿಸಲು ನೆರವಾಗಲಿದೆ ಎಂದಿದೆ.

ಜೆನೆರಿಕ್ ಔಷಧಗಳು, ರತ್ನ, ವಜ್ರ, ವಿಮಾನಗಳ ಬಿಡಿಭಾಗ ಸೇರಿದಂತೆ ಹಲವು ವಸ್ತುಗಳ ಮೇಲೆ ಸುಂಕ ಶೂನ್ಯಕ್ಕೆ ಇಳಿಯಾಗಲಿವೆ. ಇದರಿಂದ ಭಾರತದ ರಫ್ತು ಹಾಗೂ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಉತ್ತೇಜನ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಭಾರತದ ಕೆಲವು ವಿಮಾನಗಳ ಬಿಡಿಭಾಗಗಳ ಮೇಲಿನ ಸುಂಕವನ್ನು ಅಮೆರಿಕ ತೆಗೆದು ಹಾಕಲಿದೆ ಎಂದು ಹೇಳಿದೆ. ಉಭಯ ದೇಶಗಳು ಆದ್ಯತೆಯ ಮಾರುಕಟ್ಟೆಯನ್ನು ಪ್ರವೇಶಿಸಲು ಬದ್ಧವಾಗಿದೆ ಎಂದು ತಿಳಿಸಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಭಾರತವು ಅಮೆರಿಕದಿಂದ 500 ಬಿಲಿಯನ್ ಡಾಲರ್ ಮೌಲ್ಯದ ಇಂಧನ ಉತ್ಪನ್ನ, ವಿಮಾನ ಬಿಡಿಭಾಗ, ಅಮೂಲ್ಯ ಲೋಹ, ತಂತ್ರಜ್ಞಾನ ವಸ್ತು ಮತ್ತು ಕಲ್ಲಿದ್ದಲು ಖರೀದಿಸಲು ಉದ್ದೇಶಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.