ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾಳ ಕೊಲ್ಲಿಯಲ್ಲಿ ಮುಳುಗುತ್ತಿದ್ದ ಸರಕು ಸಾಗಣೆ ಹಡಗಿನಿಂದ 11 ಮಂದಿ ರಕ್ಷಣೆ

Published : 26 ಆಗಸ್ಟ್ 2024, 15:29 IST
Last Updated : 26 ಆಗಸ್ಟ್ 2024, 15:29 IST
ಫಾಲೋ ಮಾಡಿ
Comments

ನವದೆಹಲಿ: ಬಂಗಾಳ ಕೊಲ್ಲಿಯ ದಕ್ಷಿಣ ಸಾಗರ ದ್ವೀಪದಿಂದ 90 ನಾಟಿಕಲ್‌ ಮೈಲು ದೂರದಲ್ಲಿ ಮುಳುಗುತ್ತಿದ್ದ ಸರಕು ಸಾಗಣೆ ಹಡಗಿನಿಂದ 11 ಮಂದಿ ಸಿಬ್ಬಂದಿಯನ್ನು ಸೋಮವಾರ ಕರಾವಳಿ ಭದ್ರತಾ ಪಡೆ (ಐಸಿಜಿ) ರಕ್ಷಿಸಿದೆ.

ಮುಂಬೈ ನೋಂದಣಿ ಹೊಂದಿದ್ದ ಸರಕು ಸಾಗಣೆ ಹಡಗು ಶನಿವಾರ ಕೋಲ್ಕತ್ತದಿಂದ ಪೋರ್ಟ್‌ಬ್ಲೇರ್‌ಗೆ ತೆರಳುತ್ತಿತ್ತು.

‘ಹಡಗು ಮುಳುಗುತ್ತಿರುವ ಕುರಿತು ಆಗಸ್ಟ್‌ 25ರ ತಡರಾತ್ರಿ ಕೋಲ್ಕತ್ತದಲ್ಲಿರುವ ಐಸಿಜಿಯ ಈಶಾನ್ಯ ಕಚೇರಿಗೆ ಸಂದೇಶ ತಲುಪಿತ್ತು. ತಕ್ಷಣವೇ ಡೋರ್ನಿಯರ್‌ ವಿಮಾನ, ಐಸಿಜಿಯ ಹಡಗುಗಳು ಸ್ಥಳಕ್ಕೆ ತಲುಪಿ, ಪ್ರತಿಕೂಲ ಹವಾಮಾನದಲ್ಲಿಯೂ ಸವಾಲಿನ ಕಾರ್ಯಾಚರಣೆ ನಡೆಸಿ, ಎಲ್ಲರನ್ನೂ ರಕ್ಷಿಸಿವೆ’ ಎಂದು ಐಸಿಜಿ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT