ಮುಂಬೈ: ಅಮೆರಿಕದಲ್ಲಿ ಉದ್ಯೋಗ ಹುಡುಕುವ ಭಾರತೀಯರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ ಎಂದು ಗ್ಲೋಬಲ್ ಜಾಬ್ ಪೊರ್ಟಲ್ ವರದಿ ಮಾಡಿದೆ.

ಅಮೆರಿಕದಲ್ಲಿ ಭಾರತೀಯರ ಉದ್ಯೋಗ ಹುಡುಕಾಟದ ಪ್ರಮಾಣವು 2019ರ ಜನವರಿಯಲ್ಲಿ ಶೇ 58ರಷ್ಟಿತ್ತು. 2020ರ ಜೂನ್ ವೇಳೆಗೆ ಶೇ 42ಕ್ಕೆ ಕುಸಿದಿದೆ. ಇದರ ಹೊರತಾಗಿಯೂ ವಿದೇಶದಲ್ಲಿ ಉದ್ಯೋಗಗಳನ್ನು ಅರಸುವ ಭಾರತೀಯರ ನೆಚ್ಚಿನ ದೇಶವಾಗಿ ಅಮೆರಿಕ ಉಳಿದುಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕದಲ್ಲಿ ಕೋವಿಡ್ ಸೃಷ್ಟಿಸಿರುವ ಬಿಕ್ಕಟ್ಟು, ನೌಕರಿಯ ಅನಿಶ್ಚಿತತೆ ಹಾಗೂ ವಲಸೆ ನೀತಿಯಲ್ಲಿನ ಬದಲಾವಣೆಗಳೇ ಈ ಬೆಳವಣಿಗೆಗೆ ಕಾರಣವೆಂದು ತಿಳಿದುಬಂದಿದೆ.

ಜಾಬ್ ಪ್ಲಾಟ್‌ಫಾರ್ಮ್‌ಗಳಲ್ಲಿ ಉದ್ಯೋಗ ಹುಡುಕುವವರ ಅಂಕಿ-ಅಂಶಗಳನ್ನು ಸಂಗ್ರಹಿಸಿ ಮತ್ತು ವಿಶ್ಲೇಷಿಸಿ ಈ ವರದಿಯನ್ನು ತಯಾರಿಸಲಾಗಿದೆ.

ಭಾರತೀಯ ಉದ್ಯೋಗಾಕಾಂಕ್ಷಿಗಳು ಜಗತ್ತಿನಾದ್ಯಂತ ಉದ್ಯೋಗಗಳನ್ನು ಹುಡುಕಲು ಈಗಲೂ ಉತ್ಸುಕರಾಗಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ತಂತ್ರಜ್ಞಾನ, ಆಡಳಿತ ಮತ್ತು ನಿರ್ವಹಣೆ, ಮಾರಾಟ ಮತ್ತು ಗ್ರಾಹಕ ಮಾರುಕಟ್ಟೆ ಮುಂತಾದ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲು ಬಯಸಿದ್ದಾರೆ ಎಂದು ವರದಿ ತಿಳಿಸಿದೆ.

ಅಮೆರಿಕಾದಲ್ಲಿ ಉದ್ಯೋಗ ಹುಡುಕುತ್ತಿರುವ 10 ಭಾರತೀಯರಲ್ಲಿ 9 ಜನರು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧ ಪಟ್ಟವರಾಗಿದ್ದಾರೆ.

ಇದೇ ಸಮಯದಲ್ಲಿ, ಕೆನಡಾ, ಯುಎಇ, ಇಂಗ್ಲೆಂಡ್, ಸಿಂಗಾಪುರ್, ಆಸ್ಟ್ರೇಲಿಯಾ ಮತ್ತು ಕತಾರ್‌ಗಳಲ್ಲಿ ಉದ್ಯೋಗ ಹುಡುಕುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.