ನವದೆಹಲಿ: ಭಾರತೀಯ ನೌಕಾಪಡೆಯ ಏಳನೇ ಯುದ್ಧ ನೌಕೆ ಪಿ1135.6 ಅನ್ನು ರಷ್ಯಾದ ಕಲಿನಿನ್ಗ್ರಾಡ್ ನಲ್ಲಿರುವ ಯಂತರ್ ಹಡಗು ನಿರ್ಮಾಣ ತಾಣದಲ್ಲಿ (ಶಿಪ್ಯಾರ್ಡ್) ರಷ್ಯಾದ ಭಾರತೀಯ ರಾಯಭಾರಿ ಡಿ. ಬಾಲಾ ವೆಂಕಟೇಶ್ ವರ್ಮಾ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಉಡಾವಣೆ ಸಮಾರಂಭದಲ್ಲಿ ಈ ಯುದ್ಧ ನೌಕೆಗೆ ‘ತುಶಿಲ್‘ ಎಂದು ಹೆಸರಿಸಲಾಯಿತು. ಇದು ಸಂಸ್ಕೃತ ಪದವಾಗಿದ್ದು, ಇದಕ್ಕೆ‘ರಕ್ಷಕ ಗುರಾಣಿ‘ ಎಂದು ಅರ್ಥವಿರುವುದಾಗಿ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.

ಅಕ್ಟೋಬರ್ 2016ರಲ್ಲಿ ನಾಲ್ಕು ಹೆಚ್ಚುವರಿ ಪಿ1135.6 ವರ್ಗದ ಯುದ್ಧ ನೌಕೆಗಳನ್ನು ನಿರ್ಮಿಸುವ ಒಪ್ಪಂದಕ್ಕೆಭಾರತ ಮತ್ತು ರಷ್ಯಾ ಸರ್ಕಾರಗಳು ಜಂಟಿಯಾಗಿ ಸಹಿ ಹಾಕಿದ್ದವು. ರಷ್ಯಾ ಮತ್ತು ಭಾರತದಲ್ಲಿ ತಲಾ ಎರಡು ಯುದ್ಧ ನೌಕೆಗಳನ್ನು ನಿರ್ಮಾಣ ಮಾಡುವುದಾಗಿ ಒಪ್ಪಂದದಲ್ಲಿ ಹೇಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.