ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಸ್ಟ್ರೇಲಿಯಾದಲ್ಲಿ ಭಾರತ ಮೂಲದ ಅಡುಗೆಯವರಿಗೆ 2 ವರ್ಷದಿಂದ ವೇತನವಿಲ್ಲ

Last Updated 15 ಮಾರ್ಚ್ 2023, 16:38 IST
ಅಕ್ಷರ ಗಾತ್ರ

ಮೆಲ್ಬರ್ನ್‌: ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಉದ್ಯೋಗಿಯಾಗಿ ನೇಮಕಗೊಂಡಿದ್ದ ಭಾರತ ಮೂಲದ ಅಡುಗೆಯವರಿಗೆ ಎರಡು ವರ್ಷಗಳ ಕಾಲ ಸಂಬಳ ನೀಡಲಾಗಿಲ್ಲ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ಮಾವ್ಸನ್ ಲೇಕ್ಸ್‌ನಲ್ಲಿರುವ ಭಾರತೀಯ ರೆಸ್ಟೋರೆಂಟ್ ದರ್ಶನಾಸ್ ಕರ್ರಿ ಮತ್ತು ಟೀ ಹೌಸ್‌ನಲ್ಲಿ ಕೆಲಸಕ್ಕೆ ಪವನ್‌ಜೀತ್ ಸೇರಿಕೊಂಡರು. 2013 ರಿಂದ 2015ರವರೆಗೆ ಈಕೆಗೆ ಯಾವುದೇ ವೇತನ, ಹೆಚ್ಚುವರಿ ಸಂಬಳ, ವಾರ್ಷಿಕ ರಜೆ ನೀಡಿಲ್ಲ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಸಂತ್ರಸ್ತೆ ಕುಕಿಂಗ್ ಮತ್ತು ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌ನಲ್ಲಿ ಕೋರ್ಸ್ ಮುಗಿಸಿದ ನಂತರ, ಕಿರಣ್‌ಬಹೈ ಪಟೇಲ್ ಎಂಬಾತ ಮೇ 2013ರಲ್ಲಿ ದರ್ಶನಾಸ್ ಕರಿ ಮತ್ತು ಟೀ ಹೌಸ್ ರೆಸ್ಟೋರೆಂಟ್‌ನಲ್ಲಿ ಆಕೆಯನ್ನು ಅಡುಗೆಯವರನ್ನಾಗಿ ನೇಮಕ ಮಾಡಿಕೊಂಡಿದ್ದಾರೆ.

ಸಂತ್ರಸ್ತೆ ವಕೀಲರ ಪ್ರಕಾರ, 2008 ರಲ್ಲಿ ವಿದ್ಯಾರ್ಥಿಯಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ ಪವನ್‌ಜೀತ್‌ಗೆ ಸುಮಾರು ₹1,65,74,500ರಷ್ಟು ಕಡಿಮೆ ವೇತನ ನೀಡಲಾಗಿದೆ.

ಕೆಲಸಕ್ಕೆ ನೇಮಕಗೊಂಡ ಆರಂಭದಲ್ಲಿ 2013ರ ಜೂನ್ ಮತ್ತು ಜುಲೈನಲ್ಲಿ ಮಾತ್ರ ವೇತನ ಪಾವತಿಸಿದ್ದಾರೆ ಎಂದು ದಕ್ಷಿಣ ಆಸ್ಟ್ರೇಲಿಯಾದ ಉದ್ಯೋಗ ನ್ಯಾಯಮಂಡಳಿಗೆ ತಿಳಿಸಿದ್ದಾರೆ.

2015ರ ಆಗಸ್ಟ್‌ನಲ್ಲಿ ಪವನ್‌ಜೀತ್ ಅವರ ಅನಾರೋಗ್ಯದಿಂದ ಬಳಲುತ್ತಿದ್ದರೂ ಪಟೇಲ್ ರಜೆ ನಿರಾಕರಿಸಿದ್ದಾರೆ.

ಪಟೇಲ್, ಪವನ್‌ಜೀತ್‌ಗೆ ಪಾವತಿಸಬೇಕಾದ ವೇತನ ಕುರಿತು ಮತ್ತೊಂದು ವಿಚಾರಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT