ನವದೆಹಲಿ: ‘ಸೀಟು ರದ್ದತಿ ಆಧರಿಸಿ ಕಾಯ್ದಿರಿಸುವಿಕೆ (ಆರ್ಎಸಿ) ಅಡಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪೂರ್ತಿ ಆಸನ ದೊರೆಯದಿದ್ದರೂ ಪೂರ್ಣ ಪ್ರಯಾಣದರವನ್ನು ಪಡೆಯುತ್ತಿರುವುದು ನ್ಯಾಯಸಮ್ಮತವಲ್ಲ’ ಎಂದು ಸಂಸದೀಯ ಸಮಿತಿಯು ತಿಳಿಸಿದೆ.

‘ಭಾರತೀಯ ರೈಲಿನ ಕಾರ್ಯಾಚರಣೆಯಲ್ಲಿ ಸಮಯ ಪಾಲನೆ ಹಾಗೂ ಪ್ರಯಾಣದ ಸಮಯ’ದ ಕುರಿತಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ವರದಿಯನ್ನು ಬುಧವಾರ ಸಂಸತ್ತಿನಲ್ಲಿ ಮಂಡಿಸಲಾಯಿತು.

‘ಆರ್ಎಸಿ ಅಡಿ ಪ್ರಯಾಣಿಸುವ ಪ್ರಯಾಣಿಕರು ಪೂರ್ಣ ಆಸನ ಪಡೆಯುತ್ತಿಲ್ಲ. ಅಂತಹವರಿಗೆ ಭಾಗಶಃ ಮರು ಪಾವತಿ ಮಾಡಬೇಕು’ ಎಂದು ರೈಲ್ವೆ ಸಚಿವಾಲಯಕ್ಕೆ ಸಮಿತಿಯು ಸಲಹೆ ನೀಡಿದೆ.

ಈಗಿನ ಪದ್ಧತಿಯಲ್ಲಿ ಆರ್ಎಸಿ ಅಡಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪೂರ್ಣ ಪ್ರಯಾಣದರ ಪಾವತಿಸುತ್ತಿದ್ದಾರೆ. ಆರ್ಎಸಿ ಅಡಿಯಲ್ಲಿ ಪ್ರಯಾಣಿಸುವವರು ಮತ್ತೊಬ್ಬ ಪ್ರಯಾಣಿಕರ ಜೊತೆಗೆ ಸೀಟು ಹಂಚಿಕೊಳ್ಳುತ್ತಾರೆ. ಇಬ್ಬರಿಂದಲೂ ಪೂರ್ಣ ಪ್ರಯಾಣದರವನ್ನೇ ಪಡೆಯಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರಿಗೆ ಭಾಗಶಃ ಮರುಪಾವತಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದೆ.

‘ಸೂಪರ್ಫಾಸ್ಟ್ ಮಾನದಂಡ ಪರಿಶೀಲಿಸಿ’

ಭಾರತೀಯ ರೈಲಿನಲ್ಲಿ ಸೂಪರ್ಫಾಸ್ಟ್ ರೈಲುಗಳ ಮಾನದಂಡವನ್ನು ಪರಿಶೀಲಿಸುವಂತೆ ಸಮಿತಿಯು ಶಿಫಾರಸು ಮಾಡಿದೆ. 2007ರ ಮೇ ತಿಂಗಳಲ್ಲಿ ತೆಗೆದುಕೊಂಡ ನಿರ್ಧಾರದಂತೆ ‘ಬ್ರಾಡ್ಗೇಜ್ನಲ್ಲಿ ಎರಡು ದಿಕ್ಕಿನಲ್ಲಿ ಸರಾಸರಿ ಪ್ರತಿ ತಾಸಿಗೆ 55 ಕಿ.ಮೀ. ಹಾಗೂ ಮೀಟರ್ ಗೇಜ್ನಲ್ಲಿ 45 ಕಿ.ಮೀ ವೇಗದಲ್ಲಿ ಸಾಗುವ ರೈಲುಗಳನ್ನು ‘ಸೂಪರ್ಫಾಸ್ಟ್’ ಎಂದು ಪರಿಗಣಿಸಲಾಗಿದೆ.

‘ಈಗ ವಿಧಿಸಿದ ವರ್ಗೀಕರಣ ಅತ್ಯಂತ ಕಡಿಮೆ ವೇಗವಾಗಿದ್ದು 2007ರಿಂದ ಈ ಮಾನದಂಡವನ್ನು ಬದಲಾಯಿಸಿಲ್ಲ. 473 ಸೂಪರ್ಫಾಸ್ಟ್ ರೈಲುಗಳ ಪೈಕಿ 123 ರೈಲುಗಳ ವೇಗವು ತಾಸಿಗೆ 55 ಕಿ.ಮೀಗಿಂತಲೂ ಕಡಿಮೆಯಿದೆ’ ಎಂದು ಸಮಿತಿಯು ತಿಳಿಸಿದೆ. ಸಮಿತಿಗೆ ಉತ್ತರಿಸಿದ ರೈಲ್ವೆ ಸಚಿವಾಲಯವು ‘123 ರೈಲುಗಳಲ್ಲಿ 47 ರೈಲುಗಳು 55 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ ಎಂದು ಈಗಿನ ಅಂಕಿಅಂಶಗಳಿಂದ ಕಂಡುಬಂದಿದೆ. ಹೆಚ್ಚುವರಿ ನಿಲುಗಡೆಯಿಂದ ಕೆಲವು ರೈಲುಗಳ ವೇಗದಲ್ಲಿ ವ್ಯತ್ಯಯ ಉಂಟಾಗಿದೆ’ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.