‘ಜಾಗತಿಕ ಮಟ್ಟದಲ್ಲಿ ಕೋವಿಡ್–19ಗೆ ತುತ್ತಾದವರಲ್ಲಿ ಮೃತಪಡುವವರ ಶೇ 6.13ರಷ್ಟು ಇದೆ. ಭಾರತದಲ್ಲಿ ಈ ಪ್ರಮಾಣ ಶೇ 2.82ರಷ್ಟು. ಜಾಗತಿಕ ಮಟ್ಟದಲ್ಲಿ ಹೋಲಿಕೆ ಮಾಡಿದರೆ ಕೋವಿಡ್ ಸಾವಿನ ಪ್ರಮಾಣ ಭಾರತದಲ್ಲಿ ಅತ್ಯಂತ ಕಡಿಮೆ’ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು. ಆದರೆ,ಸೋಂಕು ತಗುಲಿರುವ 188 ದೇಶಗಳಿಗೆ ಹೋಲಿಸಿದರೆ, 110 ದೇಶಗಳಲ್ಲಿ ಕೋವಿಡ್ ಸಾವಿನ ಪ್ರಮಾಣ ಭಾರತಕ್ಕಿಂತಲೂ ಕಡಿಮೆ ಇದೆ. ಕೆಲವು ರಾಷ್ಟ್ರಗಳಲ್ಲಿ ಮಾತ್ರ ಕೋವಿಡ್ ಸಾವಿನ ಪ್ರಮಾಣ ಭಾರತಕ್ಕಿಂತ ಅಧಿಕವಾಗಿದೆ. ಜಾಗತಿಕ ಕೋವಿಡ್ ಸಾವಿನ ಪ್ರಮಾಣವೂ ಕೇಂದ್ರ ಸರ್ಕಾರ ಹೇಳಿದ್ದಕ್ಕಿಂತ ಕಡಿಮೆ ಇದೆ

* ಕೋವಿಡ್ ಹಾವಳಿ ಇರುವ ಐರೋಪ್ಯ ರಾಷ್ಟ್ರಗಳು, ಅಮೆರಿಕ ಮತ್ತು ಬ್ರೆಜಿಲ್‌ನಲ್ಲಿ ಮಾತ್ರ ಸಾವಿನ ಪ್ರಮಾಣ ಭಾರತಕ್ಕಿಂತ ಅಧಿಕವಾಗಿದೆ

*ಏಷ್ಯಾ, ಆಫ್ರಿಕಾದ ರಾಷ್ಟ್ರಗಳಿಗೆ ಹೋಲಿಸಿದರೆ ಕೋವಿಡ್ ಸಾವಿನ ಪ್ರಮಾಣ ಭಾರತದಲ್ಲಿ ಹೆಚ್ಚು

* ನಮ್ಮ ನೆರೆ ರಾಷ್ಟ್ರಗಳಿಗೆ ಹೋಲಿಸಿದರೂ ಭಾರತದಲ್ಲಿ ಸಾವಿನ ಪ್ರಮಾಣ ಅಧಿಕವಾಗಿದೆ

* ಭಾರತದಲ್ಲಿ ಕೋವಿಡ್‌ನಿಂದ ಸಾಯುತ್ತಿರುವವರ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ ಎಂಬ ಆರೋಪ ಇದೆ. ಆರೋಗ್ಯ ಸಚಿವಾಲಯವು ಈ ಆರೋಪವನ್ನು ನಿರಾಕರಿಸಿದೆ

* ‘ಕೋವಿಡ್‌ನಿಂದ ಸಾಯುತ್ತಿರುವವರ ಎಲ್ಲಾ ವಿವರಗಳನ್ನು ಕರಾರುವಕ್ಕಾಗಿ ದಾಖಲಿಸಲಾಗುತ್ತಿದೆ. ಕೋವಿಡ್‌ನಿಂದ ಸತ್ತವರ ಸಂಖ್ಯೆಯನ್ನು ಕಡಿಮೆ ತೋರಿಸುತ್ತಿಲ್ಲ’ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಲವ ಅಗರ್ವಾಲ್ ಹೇಳಿದ್ದಾರೆ

ಆಧಾರ:ಪಿಟಿಐ, ವರ್ಲ್ಡೋಮೀಟರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.