ಕೋಲ್ಕತ್ತ: ದೇಶದ ಮೊದಲ ನೀರಿನೊಳಗಿನ ಸುರಂಗ ಮಾರ್ಗದ ಮೆಟ್ರೊ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಇಲ್ಲಿ ಹಸಿರು ನಿಶಾನೆ ತೋರಿಸಿದರು.

ಕೋಲ್ಕತ್ತ ಮೆಟ್ರೊದ ಎಸ್‌ಪ್ಲನೇಡ್–ಹೌರಾ ಮೈದಾನ ಸೆಕ್ಷನ್‌ನಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ.

ಸಂಚಾರಕ್ಕೆ ಚಾಲನೆ ನೀಡಿದ ನಂತರ, ಮೋದಿ ಅವರು ಹೌರಾ ಮೈದಾನ ನಿಲ್ದಾಣಕ್ಕೆ ಮೆಟ್ರೊ ರೈಲಿನಲ್ಲಿ ಸಂಚರಿಸಿದರು. ಈ ವೇಳೆ, ಅವರು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಅದೇ ಮಾರ್ಗವಾಗಿ, ಎಸ್ಪಲನೇಡ್ ನಿಲ್ದಾಣಕ್ಕೆ ಮೋದಿ ಮರಳಿದರು. ಪಶ್ಚಿಮ ಬಂಗಾಳ ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ವೇಳೆ ಇದ್ದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು.

ಹೂಗ್ಲಿ ನದಿಯಲ್ಲಿ, ನೆಲಮಟ್ಟದಿಂದ 32 ಮೀಟರ್ ಆಳದಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ.

ಪೂರ್ವ–ಪಶ್ಚಿಮ ಕಾರಿಡಾರ್‌ನ ಭಾಗವಾಗಿರುವ, 4.8 ಕಿ.ಮೀ. ಉದ್ದದ ಎಸ್‌ಪ್ಲನೇಡ್–ಹೌರಾ ಮೈದಾನ ಸೆಕ್ಷನ್ ಅನ್ನು ₹4,960 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಇದೇ ಸಂದರ್ಭದಲ್ಲಿ, ₹520 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ, 1.25 ಕಿ.ಮೀ. ಉದ್ದದ ತಾರಾತಾಲಾ–ಮಾಜೇರ್‌ಹಾಟ್ ಸೆಕ್ಷನ್, ₹1,430 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನ್ಯೂ ಗರಿಯಾ–ಏರ್‌ಪೋರ್ಟ್ ಮಾರ್ಗದ ಕವಿ ಸುಭಾಷ್– ಹೇಮಂತ ಮುಖ್ಯೋಪಾಧ್ಯಾಯ ಸೆಕ್ಷನ್ ಅನ್ನು ಸಹ ಪ್ರಧಾನಿ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.