ನವದೆಹಲಿ: ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ವಿಭಾಗವು ಮಂಗಳವಾರ ಬಿಡುಗಡೆ ಮಾಡಿರುವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ, ಭಾರತವು ಮೂರು ಸ್ಥಾನ ಮೇಲಕ್ಕೆ ಜಿಗಿದಿದೆ.

2022ರಿಂದ 2023ರ ನಡುವೆ ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯವು 0.676ರಿಂದ 0.685ಕ್ಕೆ ಏರಿಕೆಯಾಗಿದೆ. ರ್ಯಾಂಕಿಂಗ್ ಪಟ್ಟಿಯಲ್ಲಿ 133ರಿಂದ 130ನೇ ಸ್ಥಾನಕ್ಕೇರಿದೆ.

ದೇಶದ ಆರೋಗ್ಯ ಮತ್ತು ಶಿಕ್ಷಣ ಅಸಮಾನತೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆದಾಯ ಮತ್ತು ಲಿಂಗ ಅಸಮಾನತೆಯಲ್ಲೂ ಉತ್ತಮ ಸಾಧನೆ ತೋರಿದೆ. ಆದರೆ, ಭಾರತವು ಮಧ್ಯಮ ಅಭಿವೃದ್ಧಿ ಸ್ಥಾನದಲ್ಲಿಯೇ ಮುಂದುವರಿದಿದೆ ಎಂದು ಯುಎನ್ಡಿಪಿ ವರದಿ ವಿವರಿಸಿದೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಸ್ಥಾನ ಮೀಸಲಿಡುವ ಬಗ್ಗೆ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿದೆ. ಆದರೆ, ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಮತ್ತು ರಾಜಕೀಯ ಪ್ರಾತಿನಿಧ್ಯದಲ್ಲಿ ಹಿನ್ನಡೆಯಾಗಿದೆ ಎಂದು ಹೇಳಿದೆ.

ಭಾರತದಲ್ಲಿ ಅಸಮಾನತೆಯು ಶೇ 30.7ರಷ್ಟು ತಗ್ಗಿದೆ. ದೇಶದ ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯವು ಜಾಗತಿಕ ಮತ್ತು ದಕ್ಷಿಣ ಏಷ್ಯಾದ ಸರಾಸರಿಗೆ ಹೋಲಿಸಿದರೆ ಏರಿಕೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

‘ಭಾರತದ ಸಾಧನೆಯು ಗಮನಾರ್ಹವಾಗಿದೆ. ಶಾಲಾ ಕಲಿಕೆಯ ಅವಧಿ ಮತ್ತು ರಾಷ್ಟ್ರೀಯ ತಲಾದಾಯದಲ್ಲಿನ ಸಾಧನೆಯು ಗಣನೀಯ ಸುಧಾರಣೆ ಕಂಡಿದೆ’ ಎಂದು ಭಾರತದ ಯುಎನ್ಡಿಪಿ ವಿಭಾಗದ ಪ್ರತಿನಿಧಿ ಏಂಜೆಲಾ ಲುಸಿಗಿ ಹೇಳಿದ್ದಾರೆ.

‘ಸೂಚ್ಯಂಕ ಆರಂಭಗೊಂಡ ಅವಧಿಯಿಂದ ಇಲ್ಲಿಯವರೆಗೆ ಹೋಲಿಸಿದರೆ ಜೀವಿತಾವಧಿಯು ಗರಿಷ್ಠ ಮಟ್ಟದಲ್ಲಿ ಏರಿಕೆ ಕಂಡಿದೆ’ ಎಂದಿದ್ದಾರೆ.

ಎ.ಐ ಮುಂಚೂಣಿ: ದೇಶವು ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಮುಂಚೂಣಿ ಸ್ಥಾನ ಕಾಯ್ದುಕೊಂಡಿದೆ ಎಂದು ವರದಿಯು ಉಲ್ಲೇಖಿಸಿದೆ. ಎ.ಐ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಿದೆ. 2019ರಲ್ಲಿ ದೇಶದಲ್ಲಿ ಎ.ಐ ಸಂಶೋಧಕರ ಸಂಖ್ಯೆ ಶೂನ್ಯ ಮಟ್ಟದಲ್ಲಿತ್ತು. ಈಗ ಶೇ 20ರಷ್ಟು ಏರಿಕೆಯಾಗಿದೆ. ಈ ವಲಯವು ಯುವಜನರಿಗೆ ಹೊಸ ಉದ್ಯೋಗ ಕಲ್ಪಿಸಲಿದೆ. ಜೊತೆಗೆ ಉತ್ಪಾದಕತೆ ಹೆಚ್ಚಳಕ್ಕೆ ನೆರವಾಗಲಿದೆ. ಕೃಷಿ ಆರೋಗ್ಯ ಸೇರಿ ಎಲ್ಲಾ ವಲಯಗಳಲ್ಲೂ ಈ ತಂತ್ರಜ್ಞಾನ ತಳವೂರುತ್ತಿದೆ ಎಂದು ಹೇಳಿದೆ.

13.5 ಕೋಟಿ ಜನ ಬಡತನ ಮುಕ್ತ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜನ್ಧನ್ ಯೋಜನೆ ಸೇರಿ ಸರ್ಕಾರ ಜಾರಿಗೊಳಿಸಿರುವ ಡಿಜಿಟಲ್ ಸೇರ್ಪಡೆ ಕಾರ್ಯಕ್ರಮಗಳು ಬಡತನ ನಿರ್ಮೂಲನೆಗೆ ಹೆಚ್ಚಿನ ಕೊಡುಗೆ ನೀಡಿವೆ. 2015–16ರಿಂದ 2019–21 ನಡುವೆ 13.5 ಕೋಟಿ ಜನರು ಬಹು ಆಯಾಮದ ಬಡತನ ರೇಖೆಯಿಂದ ಹೊರ ಬಂದಿದ್ದಾರೆ.

ತಲಾದಾಯ 4 ಪಟ್ಟು ಏರಿಕೆ: ಭಾರತದ ಆರ್ಥಿಕ ಬೆಳವಣಿಗೆಯು ಸಾಕಷ್ಟು ಸುಧಾರಣೆಯಾಗಿದೆ. ರಾಷ್ಟ್ರೀಯ ಸರಾಸರಿ ತಲಾದಾಯವು ನಾಲ್ಕು ಪಟ್ಟು ಏರಿಕೆಯಾಗಿದೆ. 1990ರಲ್ಲಿ ತಲಾದಾಯ 2167.22 ಡಾಲರ್ ಇತ್ತು. 2023ರಲ್ಲಿ 9046.76 ಡಾಲರ್ಗೆ ಏರಿಕೆಯಾಗಿದೆ.

ಜೀವಿತಾವಧಿ ಹೆಚ್ಚಳ: ದೇಶದಲ್ಲಿ ಸರಾಸರಿ ಜೀವಿತಾವಧಿಯು 71.5 ವರ್ಷದಿಂದ 72 ವರ್ಷಕ್ಕೆ ಹೆಚ್ಚಳವಾಗಿದೆ. 1990ರಲ್ಲಿ ಭಾರತೀಯರ ಜೀವಿತಾವಧಿ 58.6 ವರ್ಷ ಇತ್ತು. ಇದು ಸೂಚ್ಯಂಕ ಆರಂಭಗೊಂಡ ದಿನದಿಂದ ಇಲ್ಲಿಯವರೆಗೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಆಯುಷ್ಮಾನ್ ಭಾರತ್ ಜನನಿ ಸುರಕ್ಷಾ ಯೋಜನೆ ಮತ್ತು ಪೋಷಣ್ ಅಭಿಯಾನವು ಇದಕ್ಕೆ ಬಹುದೊಡ್ಡ ಕೊಡುಗೆ ನೀಡಿವೆ.

ಶಾಲಾ ಕಲಿಕೆ: ಶಾಲಾ ಕಲಿಕೆಯ ನಿರೀಕ್ಷಿತ ಅವಧಿಯಲ್ಲಿ ಹೆಚ್ಚಿನ ಸುಧಾರಣೆಯಾಗಿಲ್ಲ. 12.96 ವರ್ಷದಿಂದ 12.95 ವರ್ಷ ಆಗಿದೆ (2022ರಲ್ಲಿ 12.96 ವರ್ಷ ಇತ್ತು). ಶಾಲಾ ಕಲಿಕೆಯ ಸರಾಸರಿ ಅವಧಿಯು 6.88 ವರ್ಷ ಆಗಿದೆ (2022ರಲ್ಲಿ 6.57 ವರ್ಷ ಇತ್ತು). ಆದರೆ 90ರ ದಶಕದಲ್ಲಿನ ಶಿಕ್ಷಣಕ್ಕೆ ಹೋಲಿಸಿದರೆ ಸಾಕಷ್ಟು ಸುಧಾರಣೆಯಾಗಿದೆ. ಶಿಕ್ಷಣ ಹಕ್ಕು ಕಾಯ್ದೆ ಸಮಗ್ರ ಶಿಕ್ಷಣ ಅಭಿಯಾನ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಯು ಇದಕ್ಕೆ ಸಹಕಾರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.