ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರಕ್ಕೆ ಸ್ಥಳೀಯ ಜನಾಂಗಗಳೇ ಮುಖ್ಯ ಗುರಿ: ಹಿಮಂತ ಬಿಸ್ವಾ

Published 28 ಜನವರಿ 2024, 14:40 IST
Last Updated 28 ಜನವರಿ 2024, 14:40 IST
ಅಕ್ಷರ ಗಾತ್ರ

ಡಿಬ್ರುಗಢ: ಮುಖ್ಯವಾಹಿನಿ ಧರ್ಮಗಳು ನಡೆಸುವ ಮತಾಂತರ ಪ್ರಯತ್ನಕ್ಕೆ ದೇಶದ ಸ್ಥಳೀಯ ಜನಾಂಗಗಳೇ ಹೆಚ್ಚಾಗಿ ಗುರಿಯಾಗುತ್ತವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಹೇಳಿದರು.

ಅಂತರರಾಷ್ಟ್ರೀಯ ಸಂಸ್ಕೃತಿ ಅಧ್ಯಯನ ಕೇಂದ್ರ (ಐಸಿಸಿಎಸ್‌) ಆಯೋಜಿಸಿದ್ದ 8ನೇ ‘ಅಂತರರಾಷ್ಟ್ರೀಯ ಸಮ್ಮೇಳನ ಮತ್ತು ಹಿರಿಯರ ಕೂಟ’ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು. 

ಸರಕು ಸಾಮಗ್ರಿಗಳು, ಶಿಕ್ಷಣ, ಆರೋಗ್ಯ ಸೇವೆಯ ಆಮಿಷ ಒಡ್ಡುವ ಮೂಲಕ ಹಲವು ಧರ್ಮಗಳ ಧರ್ಮಪ್ರಚಾರಕರು ಸ್ಥಳೀಯ ಜನಾಂಗದ ಜನರನ್ನು ಮತಾಂತರಕ್ಕೆ ಮನವೊಲಿಸುತ್ತಾರೆ. ಇದರಿಂದಾಗಿ ಸ್ಥಳೀಯ ಧರ್ಮ, ಸಂಪ್ರದಾಯ ಪಾಲಿಸುವವರ ಸಂಖ್ಯೆ ಕಾಲಕ್ರಮೇಣವಾಗಿ ಕಡಿಮೆಯಾಗಿದೆ. ಇದು ಸಂಸ್ಕೃತಿ ಮತ್ತು ಆಚರಣೆಗಳ ಮೇಲೂ ವ್ಯಕ್ತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಹೇಳಿದರು.   

ಬುಡಕಟ್ಟು ಜನಾಂಗಗಳ ಹಕ್ಕುಗಳ ಹೋರಾಟಗಾರ ಬಿರ್ಸಾ ಮುಂಡಾ ಅವರು ಮತಾಂತರದ ವಿರುದ್ಧ ನಡೆಸಿದ ಹೋರಾಟವನ್ನು ಮತ್ತು ಸಾಮೂಹಿಕ ಮತಾಂತರವನ್ನು ಮಹಾತ್ಮ ಗಾಂಧಿ ವಿರೋಧಿಸಿದ್ದನ್ನು ಅವರು ಈ ವೇಳೆ ನೆನೆದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT