ನವದೆಹಲಿ (ಪಿಟಿಐ): ಅರಬ್ಬೀ ಸಮುದ್ರದಲ್ಲಿ ನಡೆದ ಯುದ್ಧನೌಕೆಗಳ ತಾಲೀಮಿನಲ್ಲಿ ಫ್ರಾನ್ಸ್‌ನ ಎರಡು ಯುದ್ಧನೌಕೆಗಳ ಜೊತೆ ಭಾರತ ನೌಕಾಪಡೆಯ ಐಎನ್‌ಎಸ್ ಸಹ್ಯಾದ್ರಿ ಪಾಲ್ಗೊಂಡಿತ್ತು ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರ್ಚ್ 11 ಮತ್ತು 12ರಂದು ತಾಲೀಮು ನಡೆಯಿತು. ಯುದ್ಧನೌಕೆಗಳು ಹಲವಾರು ರೀತಿಯ ಅಭ್ಯಾಸಗಳನ್ನು ನಡೆಸಿದವು. ಈ ನೌಕಾ ಅಭ್ಯಾಸವು ಉಭಯ ದೇಶಗಳ ಮಧ್ಯೆ ಕಾರ್ಯಸಾಧ್ಯತೆ ಮತ್ತು ಉನ್ನತ ಮಟ್ಟದ ಸಹಕಾರವನ್ನು ಪುನಃ ದೃಢೀಕರಿಸಿತು ಎಂದು ಭಾರತೀಯ ನೌಕಾಪಡೆ ಪ್ರಕಟಣೆಯಲ್ಲಿ ಹೇಳಲಾಗಿದೆ.

ಐಎನ್‌ಎಸ್ ಸಹ್ಯಾದ್ರಿಯು ಕ್ಷಿಪಣಿಗಳನ್ನು ಹೊತ್ತ ಯುದ್ಧನೌಕೆಯಾಗಿದ್ದು, ಇದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಶಸ್ತ್ರಗಳು ಮತ್ತು ಸೆನ್ಸರ್‌ಗಳನ್ನು ಹೊಂದಿದೆ. ಇದು ವಿಶಾಖಪಟ್ಟಣದಲ್ಲಿ ನೌಕಾನೆಲೆ ಹೊಂದಿರುವ ಭಾರತ ನೌಕಾಪಡೆಯ ಪೂರ್ವ ನೌಕಾಬಲದ ಭಾಗವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.