ನವದೆಹಲಿ: ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ಐಆರ್‌ಎಂಎಸ್) ಅಧಿಕಾರಿ ಸತೀಶ್ ಕುಮಾರ್ ಅವರನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಹಾಗೂ ಸಿಇಒ ಆಗಿ ಮಂಗಳವಾರ ನೇಮಕ ಮಾಡಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದವರೊಬ್ಬರು ಈ ಉನ್ನತ ಹುದ್ದೆಗೇರಿರುವುದು ಮಂಡಳಿಯ ಇತಿಹಾಸದಲ್ಲಿ ಇದೇ ಮೊದಲು ಎಂದು ರೈಲ್ವೆ ಮಂಡಳಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ಜಯ ವರ್ಮಾ ಸಿನ್ಹಾ ಅವರು ಆಗಸ್ಟ್ 31 ರಂದು ನಿವೃತ್ತಿಯಾಗಲಿದ್ದು, ಸತೀಶ್ ಕುಮಾರ್ ಅವರ ನೇಮಕವು ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ.
‘1986ರ ಬ್ಯಾಚ್‌ನ ಐಆರ್‌ಎಂಎಸ್ ಅಧಿಕಾರಿಯಾಗಿರುವ ಸತೀಶ್ ಅವರು ತಮ್ಮ 34 ವರ್ಷಗಳ ವೃತ್ತಿಜೀವನದಲ್ಲಿ ಭಾರತೀಯ ರೈಲ್ವೆಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ’ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.