ತಿರುವನಂತಪುರ: ಕೇರಳ ಸರ್ಕಾರವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಾಜಿ ವಿಜ್ಞಾನಿ ನಂಬಿ ನಾರಾಯಣನ್ ಅವರಿಗೆ ₹1.3 ಕೋಟಿ ಪರಿಹಾರ ನೀಡಿದೆ.

ಗೂಢಚಾರಿಕೆ ಪ್ರಕರಣವೊಂದರಲ್ಲಿ ನಂಬಿ ನಾರಾಯಣನ್ ಅವರ ಹೆಸರನ್ನು ಪೊಲೀಸರು ತಳಕು ಹಾಕಿದ್ದರು. ವಿಚಾರಣೆ ನಂತರ ಇದು ಸುಳ್ಳು ಆರೋಪ ಎಂದು ಸಾಬೀತಾಗಿತ್ತು. ಸ್ಥಳೀಯ ನ್ಯಾಯಾಲಯವು ನಾರಾಯಣನ್ ಅವರಿಗೆ ಪರಿಹಾರ ನೀಡಲು ಆದೇಶಿಸಿತ್ತು ಹಾಗೂ ಮೊತ್ತವನ್ನು ₹1.3 ಕೋಟಿ ಎಂದು ನಿಗದಿಪಡಿಸಲಾಗಿತ್ತು.

ಸುಪ್ರೀಂ ಕೋರ್ಟ್ ಆದೇಶದಂತೆ ಈ ಹಿಂದೆ ಅವರಿಗೆ ₹50 ಲಕ್ಷ ಪರಿಹಾರ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸಿನಂತೆ ₹ 10 ಲಕ್ಷ ಪರಿಹಾರ ನೀಡಲಾಗಿತ್ತು.

ಪ್ರಕರಣವೇನು?: 1994ರಲ್ಲಿ ಇಸ್ರೊದ ಕೆಲ ದಾಖಲೆಗಳನ್ನು ಕೆಲ ವಿಜ್ಞಾನಿಗಳು ಇಬ್ಬರು ಮಾಲ್ಡೀವ್ಸ್ ಮೂಲದ ಮಹಿಳೆಯರಿಗೆ ಸೋರಿಕೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.