ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Chandrayaan-3 |ಕಕ್ಷೆಗೆ ಸೇರಿದ ಚಂದ್ರಯಾನ–3: ಭಾರತದ ಐತಿಹಾಸಿಕ ಸಾಧನೆ

Published 14 ಜುಲೈ 2023, 6:47 IST
Last Updated 14 ಜುಲೈ 2023, 9:58 IST
ಅಕ್ಷರ ಗಾತ್ರ
06:4714 Jul 2023

ಚಂದ್ರನ ಅಂಗಳಕ್ಕೆ ಕಾಲಿಡಲು ಆಕಾಶಕ್ಕೆ ಚಿಮ್ಮಿದ ರಾಕೆಟ್‌. ಲ್ಯಾಂಡರ್‌ ರೋವರ್‌ ಹೊತ್ತು ಸಾಗಿದ ಉಡ್ಡಯನ ವಾಹನ. ಇಸ್ರೋ ವಿಜ್ಞಾನಿಗಳ ಮುಖದಲ್ಲಿ ಸಂತಸ.

07:0414 Jul 2023

ಚಂದ್ರನತ್ತ ನೆಗೆಯಲು ಶ್ರೀಹರಿಕೋಟಾದಲ್ಲಿರುವ ಉಡ್ಡಯನ ಕೇಂದ್ರದಲ್ಲಿ ಸಿದ್ಧವಾಗಿ ನಿಂತಿರುವ ‘ಬಾಹುಬಲಿ’ ಮಾರ್ಕ್‌ 3 ರಾಕೇಟ್‌ನ ಎಲ್‌110 ಹಂತಕ್ಕೆ ಇಂಧನ ಭರ್ತಿ ಮಾಡುವ ಕಾರ್ಯ ಪೂರ್ಣಗೊಂಡಿದೆ.

07:0614 Jul 2023

ಚಂದ್ರಯಾನ–3 ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.

07:0614 Jul 2023

ರಾಕೇಟ್‌ನ ಸಿ25 ಹಂತಕ್ಕೆ ಇಂಧನ ಭರ್ತಿ ಮಾಡುವ ಕಾರ್ಯವನ್ನು ಇಸ್ರೊ ತಂತ್ರಜ್ಞರು ಆರಂಭಿಸಿದ್ದಾರೆ.

07:0814 Jul 2023

ಭಾರತದ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ 2023ರ ಜುಲೈ 14 ಅನ್ನು ಸುವರ್ಣಾಕ್ಷರಗಳಲ್ಲಿ ದಾಖಲಾಗಲಿದೆ. ನಮ್ಮ ಚಂದ್ರಯಾನದ ಅದ್ಭುತ ಯೋಜನೆಯು ಭಾರತೀಯರ ಭರವಸೆ ಹಾಗೂ ಕನಸುಗಳನ್ನು ಹೊತ್ತು ಸಾಗಲಿದೆ ಎಂದಿದ್ದಾರೆ

07:4214 Jul 2023

ಚಂದ್ರಯಾನ–3 ರ ಯಶಸ್ಸಿಗೆ ಶುಭಕೋರಿ ಒಡಿಶಾದ ಮರಳು ಶಿಲ್ಪಿ ಸುದರ್ಶನ್‌ ಪಟ್ನಾಯಕ್‌ ಅವರು ಪುರಿಯಲ್ಲಿ ಮರಳಿನಲ್ಲಿ ರಚಿಸಿರುವ ಚಿತ್ರ

ಲೈವ್ ವಿಡಿಯೊ

09:0514 Jul 2023

ರಾಕೆಟ್‌ನಿಂದ ಬೇರ್ಪಟ್ಟ ಪೇಲೋಡ್

ಶ್ರೀಹರಿಕೋಟಾದ ಉಡ್ಡಯನ ಕೇಂದ್ರದಿಂದ ನಭಕ್ಕೆ ಹಾರಿದ ಎಲ್‌ವಿಎಂ3–ಎಂ4 ರಾಕೆಟ್‌

ಲ್ಯಾಂಡರ್‌ (ವಿಕ್ರಮ್‌) ಹಾಗೂ ರೋವರ್‌ (ಪ್ರಜ್ಞಾನ) ಹೊತ್ತ ರಾಕೆಟ್‌ ನಭಕ್ಕೆ ಚಿಮ್ಮಿತು. ಮಧ್ಯಾಹ್ನ 02:35 ನಿಮಿಷಕ್ಕೆ ರಾಕೆಟ್‌ ಉಡಾವಣೆಗೊಂಡಿತು.

09:2114 Jul 2023

785 ಸೆಕೆಂಡುಗಳಲ್ಲಿ 3039 ಕಿ.ಮೀ. ಕ್ರಮಿಸಿದ ರಾಕೆಟ್ . ಭೂಮಿಯಿಂದ 177 ಕಿ.ಮೀ. ಎತ್ತರದಲ್ಲಿದೆ ರಾಕೆಟ್‌

09:2514 Jul 2023

ನಿಗದಿತ ಕಕ್ಷೆ ಸೇರಿದ ಚಂದ್ರಯಾನ–3: ವಿಜ್ಞಾನಿಗಳ ಸಂತಸ

09:3314 Jul 2023

ಇಸ್ರೊ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹರ್ಷ

ಚಂದ್ರಯಾನ–3ಕ್ಕೆ ನಿಯೋಜನೆಗೊಂಡಿದ್ದ ಮಾರ್ಕ್‌–3 ರಾಕೇಟ್‌ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಎಲ್‌ವಿ ಎಂ3– ಮಾರ್ಕ್‌3 ಅತ್ಯಂತ ಯಶಸ್ವಿಯಾಗಿ ಲ್ಯಾಂಡರ್ ಹಾಗೂ ರೋವರ್‌ ಹೊತ್ತ ಘಟಕವನ್ನು ನಿಗದಿತ ಕಕ್ಷೆಗೆ ಸೇರಿಸಿದೆ. ಈ ಯೋಜನೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು  ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದರು.