ನವದೆಹಲಿ: ಎಕ್ಸ್–ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿತ ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹವನ್ನು (ಎಕ್ಸ್‌ಪೊಸ್ಯಾಟ್) ಇಂದು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಇಂದು ಬೆಳಿಗ್ಗೆ 9.10ಕ್ಕೆ ‘ಎಕ್ಸ್‌ಪೊಸ್ಯಾಟ್’ ಸೇರಿದಂತೆ ವಿದ್ಯಾಸಂಸ್ಥೆಗಳು ಮತ್ತು ಸ್ಟಾರ್ಟ್ಅಪ್‌ಗಳಿಗೆ ಸಂಬಂಧಿಸಿದ ಇತರೆ 9 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ ವಾಹಕವು ಗಗನಕ್ಕೆ ಚಿಮ್ಮಿದೆ.
ಇದು ಮೊದಲ ಸಂಪೂರ್ಣ ವೈಜಾನಿಕ ಉಪಗ್ರಹವಾಗಿದೆ.
2023ರಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಪದಾರ್ಪಣೆಯ ಬಳಿಕ ಭಾರತ, ಹೊಸ ವರ್ಷ 2024ರಲ್ಲಿ ಹೆಚ್ಚಿನ ಸವಾಲುಗಳ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿದ್ಧತೆ ನಡೆಸಿದೆ.
ಅಂತರಿಕ್ಷಕ್ಕೆ ಮನುಷ್ಯರನ್ನು ಕಳುಹಿಸುವುದು, ಸೂರ್ಯನ ಅಂಗಳದಿಂದ ಅಧ್ಯಯನಕ್ಕಾಗಿ ಮಾದರಿಗಳನ್ನು ತರುವ ಯೋಜನೆಗಳ ಜಾರಿಗೆ ಈಗ ಸಿದ್ಧತೆ ನಡೆದಿದೆ. ಈ ಎರಡೂ ಯೋಜನೆಗಳ ಪ್ರಯೋಗಾರ್ಥ ಪರೀಕ್ಷೆಯು 2024ರಲ್ಲಿ ನಿಗದಿಯಾಗಿದೆ.
ಭಾರತೀಯ ವಿಜ್ಞಾನಿಗಳ ಸಂಶೋಧನೆ ಗುರಿ ಚಂದಿರ ಮತ್ತು ಸೂರ್ಯನ ಅಂಗಳಕ್ಕಷ್ಟೇ ಸೀಮಿತವಾಗಿಲ್ಲ. ಸಮುದ್ರದಾಳದ ಸಂಶೋಧನೆಗೂ ಒತ್ತು ನೀಡಿದ್ದು, ಸಮುದ್ರದಲ್ಲಿ 500 ಮೀಟರ್ ಆಳಕ್ಕೆ ಜಲಾಂತರ್ಗಾಮಿಗಳನ್ನು ಮಾರ್ಚ್‌ನಲ್ಲಿ ಕಳುಹಿಸಲು ಸಿದ್ಧತೆ ನಡೆಸಿದ್ದಾರೆ.
ಜನವರಿ 6ರಂದು ಸಂಜೆ 4ಗಂಟೆಗೆ ಸರಿಯಾಗಿ ಆದಿತ್ಯ ಎಲ್ –1 ಉಪಗ್ರಹವನ್ನು ಲಾಗ್ರೇಂಜ್ ಪಾಯಿಂಟ್–1ಕ್ಕೆ ತಲುಪಿಸುವ ಕಾರ್ಯ ನಡೆಯಲಿದೆ. ಈ ಪ್ರಕ್ರಿಯೆಯು ಮುಂದಿನ ಐದು ವರ್ಷ ಕಾಲ ಸೂರ್ಯನ ಅನಿಯಮಿತ ಅಧ್ಯಯನಕ್ಕೆ ನೆರವಾಗಲಿದೆ.
ಅಲ್ಲದೆ, 2024ರಲ್ಲಿ ನಾಸಾ ಮತ್ತು ಇಸ್ರೊ ಜಂಟಿಯಾಗಿ ಕಾರ್ಯಗತಗೊಳಿಸಲಿರುವ 1.2 ಬಿಲಿಯನ್ ಡಾಲರ್ ವೆಚ್ಚದ ನಿಸಾರ್ ಉಪಗ್ರಹ ಉಡಾವಣೆ ನಡೆಯಲಿದೆ. ತಾಪಮಾನ ಬದಲಾವಣೆ ಅಧ್ಯಯನ ಉದ್ದೇಶದ ಅತ್ಯಂತ ದುಬಾರಿ ಉಪಗ್ರಹ ಇದಾಗಿರಲಿದೆ.
#WATCH | PSLV-C58 XPoSat Mission launch | ISRO launches X-Ray Polarimeter Satellite (XPoSat) from the first launch-pad, SDSC-SHAR, Sriharikota in Andhra Pradesh.
— ANI (@ANI) January 1, 2024
(Source: ISRO) pic.twitter.com/ws6Ik0Cdll
#WATCH | PSLV-C58 XPoSat Mission launch | ISRO launches X-Ray Polarimeter Satellite (XPoSat) from the first launch-pad, SDSC-SHAR, Sriharikota in Andhra Pradesh.
— ANI (@ANI) January 1, 2024
(Source: ISRO) pic.twitter.com/ua96eSPIcJ
PSLV-C58 XPoSat Mission | ISRO launched X-Ray Polarimeter Satellite (XPoSat) from the first launch pad, SDSC-SHAR, Sriharikota in Andhra Pradesh.
— ANI (@ANI) January 1, 2024
According to ISRO, the performances of the first, second, third and fourth stages of the mission are normal. pic.twitter.com/hO1AjJQakZ
#WATCH | On PSLV-C58 XPoSat mission, ISRO Chief S Somanath says "So 1, January 2024, yet another successful mission of PSLV has been accomplished..." pic.twitter.com/VwFCmRxvOU
— ANI (@ANI) January 1, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.