ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈ: ₹ 300 ಕೋಟಿ ಕಪ್ಪುಹಣ ಪತ್ತೆ–ಐಟಿ ಇಲಾಖೆ

ಎರಡು ಖಾಸಗಿ ಹಣಕಾಸು ಸಮೂಹಗಳ ಮೇಲೆ ದಾಳಿ
Last Updated 25 ಸೆಪ್ಟೆಂಬರ್ 2021, 8:29 IST
ಅಕ್ಷರ ಗಾತ್ರ

ನವದೆಹಲಿ: ‘ಚೆನ್ನೈನಲ್ಲಿರುವ ಎರಡು ಖಾಸಗಿ ಹಣಕಾಸು ಸಮೂಹಗಳ ಮೇಲೆ ಇತ್ತೀಚೆಗೆ ನಡೆಸಿದ ದಾಳಿ ಸಂದರ್ಭದಲ್ಲಿ ಲೆಕ್ಕಪತ್ರ ಇಲ್ಲದ ₹ 300 ಕೋಟಿ ಆದಾಯವನ್ನು ಪತ್ತೆ ಹಚ್ಚಲಾಗಿದೆ’ ಎಂದು ಆದಾಯ ತೆರಿಗೆ ಇಲಾಖೆ ಶನಿವಾರ ತಿಳಿಸಿದೆ.

ಚೆನ್ನೈನ 35 ಸ್ಥಳಗಳಲ್ಲಿ ಸೆ. 23ರಂದು ಶೋಧ ಕಾರ್ಯ ಕೈಗೊಳ್ಳಲಾಗಿತ್ತು. ಈ ದಾಳಿ ವೇಳೆ, ಲೆಕ್ಕಪತ್ರ ಇಲ್ಲದ ₹ 9 ಕೋಟಿ ನಗದು ಜಪ್ತಿ ಮಾಡಲಾಗಿದೆ ಎಂದು ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಈ ಹಣಕಾಸು ಸಂಸ್ಥೆಗಳು ತಮಿಳುನಾಡಿನ ಉದ್ಯಮಿಗಳಿಗೆ ಹಾಗೂ ಕಾರ್ಪೋರೇಟ್‌ ಸಂಸ್ಥೆಗಳಿಗೆ ಅಪಾರ ಮೊತ್ತವನ್ನು ಸಾಲವಾಗಿ ನೀಡುತ್ತಿದ್ದವು. ಈ ಸಾಲಕ್ಕೆ ಅಧಿಕ ಬಡ್ಡಿದರ ವಿಧಿಸುತ್ತಿದ್ದ ಸಂಸ್ಥೆಗಳು, ಈ ವ್ಯವಹಾರಕ್ಕೆ ಸಂಬಂಧಿಸಿ ತೆರಿಗೆ ಪಾವತಿಸುತ್ತಿರಲಿಲ್ಲ ಎಂಬುದನ್ನು ಪತ್ತೆ ಮಾಡಲಾಗಿದೆ’ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT