ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಿ ಬುದ್ಧಿಯ ಚೀನಾಕ್ಕೆ ಪಾಠ ಕಲಿಸಿದ ಭಾರತೀಯ ಸೇನೆ: ಮನೋಜ್‌ ಮುಕುಂದ ನರವಣೆ

ಆತ್ಮಚರಿತ್ರೆಯಲ್ಲಿ ಜನರಲ್‌ ಮನೋಜ್‌ ಮಕುಂದ್‌ ನರವಣೆ ಅನಾವರಣ
Published 17 ಡಿಸೆಂಬರ್ 2023, 23:30 IST
Last Updated 17 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ‘ನರಿ ಬುದ್ದಿಯ ಮತ್ತು ನೆರೆಯ ಸಣ್ಣಪುಟ್ಟ ದೇಶಗಳನ್ನು ಸಾಲದ ಮರ್ಜಿಯಲ್ಲಿ ಬೀಳಿಸಿಕೊಳ್ಳುವ ತಂತ್ರಗಾರಿಕೆಯ ಚೀನಾ ತನ್ನ ದರ್ಪ‍ವನ್ನು ವಿಶ್ವಕ್ಕೆ ತೋರಿಸಲು ಕಾಲುಕೆರೆದುಕೊಂಡು ಬಂದಾಗ ಭಾರತೀಯ ಸೇನೆ ತಕ್ಕ ಬುದ್ಧಿ ಕಲಿಸಿದೆ’ ಎಂದು ಈ ಹಿಂದಿನ ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಮಕುಂದ್‌ ನರವಣೆ ಹೇಳಿದ್ದಾರೆ.

2020ರ ಜೂನ್‌ನಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾದ ಆಕ್ರಮಣಕ್ಕೆ ಭಾರತೀಯ ಸೇನೆ ನೀಡಿದ ತಕ್ಕ ಪ್ರತ್ಯುತ್ತರದ ಬಗ್ಗೆ ನರವಣೆ ಅವರು ತಮ್ಮ ಆತ್ಮಚರಿತ್ರೆ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯಲ್ಲಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

‘ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮೊದಲ ಬಾರಿಗೆ ಹೆಚ್ಚಿನ ಸಾವುನೋವುಗಳನ್ನು ಗಾಲ್ವಾನ್‌ ಕಣಿವೆಯ ಸಂಘರ್ಷದಲ್ಲಿ ಅನುಭವಿಸಿದ ನಂತರ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಜೂನ್ 16 ಅನ್ನು ಯಾವುದೇ ಸಮಯದಲ್ಲೂ ಮರೆಯುವುದಿಲ್ಲವೆಂದು ಹೇಳಿಕೊಂಡರು. ಜೂನ್‌ 16 ಷಿ ಜಿನ್‌ ಪಿಂಗ್‌ ಅವರಿಗೆ ಜನ್ಮ ದಿನ ಕೂಡ ಹೌದು. ಆದರೆ, ಈ ಎರಡು ದಶಕಗಳ ಹೋರಾಟದಲ್ಲಿ ವಿಶ್ವದ ಮುಂದೆ ತನ್ನ ದಬ್ಬಾಳಿಕೆ ತೋರಿಸಲು ಭಾರತೀಯ ಸೇನೆ ಎದುರು ಕಾಲು ಕೆರೆದುಕೊಂಡ ಬಂದ ಚೀನಾಕ್ಕೆ ಎಂದೂ ಮರೆಯದಂತಹ ಪೆಟ್ಟನ್ನು ನೀಡಿದ್ದೇವೆ’ ಎಂದೂ ನರವಣೆ ಹೇಳಿದ್ದಾರೆ. 

ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ 20 ಸೇನಾ ಸಿಬ್ಬಂದಿ ಹುತಾತ್ಮರಾದದನ್ನು ನೆನಪಿಸಿಕೊಂಡಿರುವ ಅವರು, ‘ಇದು ನನ್ನ ಇಡೀ ವೃತ್ತಿಜೀವನದ ಅತ್ಯಂತ ದುಃಖದ ದಿನಗಳಲ್ಲಿ ಒಂದಾಗಿದೆ’ ಎಂದು ವಿಷಾದಿಸಿದ್ದಾರೆ.

ಪೆಂಗ್ವಿನ್‌ ರ‍್ಯಾಂಡಮ್‌ ಹೌಸ್‌ ಇಂಡಿಯಾ ಪ್ರಕಟಿಸಿರುವ ಈ ಕೃತಿಯು ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ. ಈ ಕೃತಿಯಲ್ಲಿ ನರವಣೆ ಅವರು ಗಾಲ್ವಾನ್‌ ಕಣಿವೆ ಸಂಘರ್ಷದಲ್ಲಿ ಭಾರತೀಯ ಸೈನಿಕರು ತೋರಿದ ಪರಾಕ್ರಮ ಮತ್ತು ಚೀನಾ ಸೇನೆ ಅನುಭವಿಸಿದ ಸಾವು–ನೋವು, ಚೀನಾದ ಆಕ್ರಮಣ ಹಿಮ್ಮೆಟ್ಟಿಸಿದ ಕುರಿತ ಹತ್ತುಹಲವು ಕುತೂಹಲದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT