ಜೈಪುರ: ಸಾಹಿತ್ಯಾಸಕ್ತರ ಬಹುನಿರೀಕ್ಷಿತ ಜೈಪುರ ಸಾಹಿತ್ಯ ಉತ್ಸವದ ಮೊದಲ ದಿನವು ವೈವಿಧ್ಯಮಯವಾದ ಗೋಷ್ಠಿಗಳಿಗೆ ಸಾಕ್ಷಿಯಾಯಿತು.

ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರು ದಿಕ್ಸೂಚಿ ಭಾಷಣ ಮಾಡುವುದರೊಂದಿಗೆ ಸಾಹಿತ್ಯ ಉತ್ಸವಕ್ಕೆ ಚಾಲನೆ ಸಿಕ್ಕಿತು. ತಾವು ಲೇಖಕಿಯಾಗಿ ಬೆಳೆದ ಪರಿಯನ್ನೂ ತಮ್ಮ ಸುತ್ತಲಿನ ಸಾಮಾಜಿಕ ಬದುಕಿನ ವಿಷಮತೆಯನ್ನೂ ಅವರು ವಿವರಿಸಿದರು.

ಬಾನು ಅವರ ಭಾಷಣದ ಬಳಿಕ ರಾಜಸ್ಥಾನದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ, ಉಪಮುಖ್ಯಮಂತ್ರಿ ದಿಯಾ ಕುಮಾರಿ ಸೇರಿದಂತೆ ಹಲವು ಗಣ್ಯರು ದೀಪ ಬೆಳಗಿದರು.

‘ಅರಬ್ಬರು ಮತ್ತು ಯಹೂದಿಗಳ ನಡುವಿನ ಸಹಬಾಳ್ವೆ’ ಗೋಷ್ಠಿಯಲ್ಲಿ ಚರಿತ್ರೆಯಲ್ಲಿನ ಸಹಜೀವನ ಮತ್ತು ವರ್ತಮಾನದ ವ್ಯತ್ಯಾಸಗಳ ಬಗ್ಗೆ ಸಂವಾದ ನಡೆಯಿತು.

‘ಪವಿತ್ರ ನೆಲವನ್ನು ಜನರ ಧರ್ಮಗಳ ಆಧಾರದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ವಿಘಟನೆ ಮಾಡಲಾಗುತ್ತಿದೆ’ ಎಂದ ಅರಬ್ ಇತಿಹಾಸಕಾರ ಉಸ್ಸಾಮಾ ಮಕ್ದೀಸಿ, ‘ಪಶ್ಚಿಮದ ವಸಾಹತುಶಾಹಿಯೇ ಅರಬ್ ರಾಷ್ಟ್ರಗಳ ಬಿಕ್ಕಟ್ಟುಗಳಿಗೆ ಕಾರಣ’ ಎಂದರು. ಸಹಬಾಳ್ವೆಯ ಚರಿತ್ರೆಯನ್ನು ಶೋಧಿಸಬೇಕು ಎನ್ನುವುದು ಅವರ ಅಭಿಪ್ರಾಯ.

‘ಅರಬರು ಮತ್ತು ಯಹೂದಿಗಳ ಹುಸಿ ಧ್ರುವೀಕರಣದಲ್ಲಿ ನನಗೆ ನಂಬಿಕೆ ಇಲ್ಲ’ ಎಂದು ಯಮನ್ನ ಪತ್ರಕರ್ತೆ ನೋವಾ ಅವಿಶಗ್ಶನಾಲ್ ಹೇಳಿದರು.

ಸ್ವಾತಂತ್ರ್ಯಪೂರ್ವದ ಸಂಸ್ಕೃತ ಪಂಡಿತರ ಕುರಿತ ಗೋಷ್ಠಿಯಲ್ಲಿ, ಸಂಸ್ಕೃತ ಪಂಡಿತರು ಬುದ್ಧಿಜೀವಿಗಳಾಗಿ ನಿರ್ವಹಿಸಿದ ಪಾತ್ರವನ್ನು ಆಚಾರ್ಯ ರಾಧಾವಲ್ಲಭ್ ತ್ರಿಪಾಠಿ ವಿವರಿಸಿದರು. ಸಂಸ್ಕೃತ ಭಾಷೆ, ಸಾಹಿತ್ಯದ ಮೇಲೆ ಪ್ರಭುತ್ವ ಸಾಧಿಸಿದ್ದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರೂ ಪಂಡಿತರಾಗಿದ್ದರು ಎಂದ ಅವರು, ಅಕ್ಬರ್ ತನ್ನ ಕಾಲದಲ್ಲಿ ಸಂಸ್ಕೃತ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಕೃತಕ ಬುದ್ಧಿಮತ್ತೆ ಮತ್ತು ಓದುವಿಕೆ, ಪುಸ್ತಕಗಳ ಭವಿಷ್ಯದ ಬಗ್ಗೆ ನಡೆದ ಗೋಷ್ಠಿಯಲ್ಲಿ ಮಂಡನೆಯಾದ ವಿಚಾರಗಳು ಆಸಕ್ತಿಕರವಾಗಿದ್ದವು.

ಗೋಷ್ಠಿಯಲ್ಲಿ ಭಾಗವಹಿಸಿದ್ದ ಲೇಖಕ ಗುರುಚರಣ್ ದಾಸ್, ‘ಎಐ ಏಕಕಾಲಕ್ಕೆ ತಮ್ಮಲ್ಲಿ ಏಕಕಾಲಕ್ಕೆ ಕುತೂಹಲವನ್ನೂ, ಆತಂಕವನ್ನೂ ಉಂಟುಮಾಡುತ್ತದೆ. ಅದಕ್ಕೆ ಯಾವುದೇ ನೈತಿಕ ಬದ್ಧತೆಯಾಗಲಿ, ಉತ್ತರದಾಯಿತ್ವವಾಗಲಿ ಇಲ್ಲ’ ಎಂದು ಅಭಿಪ್ರಾಯಪಟ್ಟರು.

‘ಎಐ ಬಗ್ಗೆ ಭಯದ ಅಗತ್ಯವಿಲ್ಲ’ ಎಂದವರು ಪತ್ರಕರ್ತ ಸಮೀರ್ ಪಾಟೀಲ್. ಆದರೆ, ಅದು ಉಳ್ಳವರು ಮತ್ತು ಇಲ್ಲದವರ ನಡುವಿನ ಅಸಮಾನತೆಯನ್ನು ಹೆಚ್ಚಿಸುವ ಅಪಾಯ ಇದೆ ಎಂದರು. ಪ್ರಕಾಶಕಿ ಮೇರು ಗೋಖಲೆ ಎಐನಿಂದ ಪ್ರಕಾಶಕರೂ ಸೇರಿದಂತೆ ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಹಲವು ಲಾಭಗಳಿವೆ ಎಂದು ಅಭಿಪ್ರಾಯಪಟ್ಟರು.

ವಿಯೆಟ್ನಾಂ ಯುದ್ಧ ಕುರಿತ ಗೋಷ್ಠಿಯಲ್ಲಿ, ಪುಲಿಟ್ಜರ್ ಪ್ರಶಸ್ತಿ ವಿಜೇತ ಲೇಖಕ ಫ್ರೆಡ್ರಿಕ್ ಲೋಗೆವಾಲ್ ಅವರು, ಪ್ರಸ್ತುತ ಅಮೆರಿಕದ ವಿದೇಶಾಂಗ ನೀತಿಗಳ ಹಿನ್ನೆಲೆಯಲ್ಲಿ ವಿಯೆಟ್ನಾಂನ ಸಂಕೀರ್ಣ ಇತಿಹಾಸವನ್ನು, ಯುದ್ಧದಲ್ಲಿ ಅಮೆರಿಕ ವಹಿಸಿದ ಅವ್ಯಕ್ತ ಪಾತ್ರವನ್ನು ಅರಿಯುವುದು ಮುಖ್ಯ ಎಂದರು.

ಬಾನು ಮುಷ್ತಾಕ್ ಮಾತು

ಉತ್ಸವದ ಮೊದಲ ದಿನ ಆಕರ್ಷಿಸಿದ್ದು ಬಾನು ಮುಷ್ತಾಕ್ ಅವರ ಮಾತು. ‘ಅಸಮಾನತೆ ಹಿಂಸೆ ಮೌನ ಇರುವ ಸಮಾಜಗಳಲ್ಲಿ ಸಾಹಿತ್ಯ ಸೃಷ್ಟಿಯ ಕೆಲಸವು ಅಸ್ತಿತ್ವದ ಮತ್ತು ಪ್ರತಿರೋಧದ ಕ್ರಿಯೆಯಾಗಿರುತ್ತದೆ. ಸುತ್ತಲಿನ ಮಹಿಳೆಯರ ಮೂಕವೇದನೆ ಕಂಡು ಮೌನವಾಗಿ ಉಳಿಯಲು ನನಗೆ ಸಾಧ್ಯವಾಗಲಿಲ್ಲ. ಬರವಣಿಗೆ ಆರಂಭವಾಗುವುದು ಕಾಗದದ ಮೇಲಲ್ಲ; ಅನುಭವ ನೆನಪು ನೋವು ಭರವಸೆಗಳು ದೇಹದ ಮೂಲಕ ಹರಿದು ಅಕ್ಷರಗಳಾಗುತ್ತವೆ. ಶೋಷಣೆ ಸಹಜ ಎನ್ನುವಂತಾದಾಗ ಬರವಣಿಗೆಗೆ ರಾಜಕೀಯ ಆಯಾಮ ದಕ್ಕುತ್ತದೆ. ಜಾತಿ ಧರ್ಮ ಲಿಂಗ ನಂಬಿಕೆ ಆಧಾರಿತವಾದ ಅಸಮಾನತೆಗಳು ಸಂಕೀರ್ಣವಾಗಿ ಹೆಣೆದುಕೊಂಡಿರುವ ಸಮಾಜದಲ್ಲಿ ತಟಸ್ಥವಾಗಿ ಉಳಿಯುವುದು ಸಾಧ್ಯವಾಗುವುದಿಲ್ಲ. ಇಂಥ ಸಮಾಜವು ಲೇಖಕರನ್ನು ಕಟಕಟೆಯಲ್ಲಿ ನಿಲ್ಲಿಸುತ್ತದೆ' ಎಂದರು. ‘ಚಳವಳಿಗಳ ಸಾಹಚರ್ಯವೇ ತಮ್ಮನ್ನು ಲೇಖಕಿಯಾಗಿ ರೂಪಿಸಿತು’ ಎಂದು ವಿವರಿಸಿದರು.

ಮಾರ್ದನಿಸಿದ ನಗಾರಿ ಸದ್ದು

ಉತ್ಸವದ ಮೊದಲ ದಿನ ನೆರೆದಿದ್ದವರನ್ನು ಬೆರಗುಗೊಳಿಸಿದ್ದು ಜನಪದ ಕಲಾವಿದರಾದ ನಾತೂಲಾಲ್ ಸೋಲಂಕಿ ಅವರ ತಂಡ. ಕ್ಲಾರ್ಕ್ಸ್ ಆಮೇರ್ ಹೋಟೆಲ್ನ ಮೂಲೆಮೂಲೆಯಲ್ಲೂ ಅವರ ನಗಾರಿ ಸದ್ದು ಮಾರ್ದನಿಸಿತು. ಖಂಡಾಂತರದಿಂದ ಬಂದ ವಿವಿಧ ವಿಷಯಗಳ ಪರಿಣತರಿಗಿಂತಲೂ ಒಂದು ಕೈ ಮಿಗಿಲು ಎನ್ನುವಂತೆ ಅವರ ಕಲಾವಂತಿಕೆಯು ಸಹೃದಯರ ಮನಸೂರೆಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.