ಮ್ಯೂನಿಚ್: ಭಾರತ– ಕೆನಡಾ ನಡುವಿನ ಸಹಕಾರ ಮತ್ತು ಪಾಲುದಾರಿಕೆಯ ಅವಕಾಶಗಳ ಕುರಿತಂತೆ ಉಭಯ ದೇಶಗಳ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ಹಾಗೂ ಅನಿತಾ ಆನಂದ್ ಅವರು ಇಲ್ಲಿ ಚರ್ಚಿಸಿದರು.

ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವಿನ ಬಾಂಧವ್ಯ 2023ರಿಂದಲೂ ಹದಗೆಟ್ಟಿತ್ತು. ರಾಜತಾಂತ್ರಿಕ ಸಂಬಂಧವು ಮುರಿದುಬಿದ್ದಿತ್ತು. ಇದೀಗ ಉಭಯ ದೇಶಗಳು ತಮ್ಮ ನಡುವಿನ ಬಾಂಧವ್ಯ ವೃದ್ಧಿಗೆ ಪರಸ್ಪರ ಮುಂದಾಗಿವೆ.

ಕೆನಡಾ ಪ್ರಧಾನಿ ಮಾರ್ಕ್ ಕಾರ್ನೆ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಮುನ್ನವೇ ವಿದೇಶಾಂಗ ಸಚಿವರು ಮ್ಯೂನಿಚ್ನಲ್ಲಿ ನಡೆದ ಭದ್ರತಾ ಸಮಾವೇಶದಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಸುಮಧುರ ಬಾಂಧವ್ಯ ಪುನರ್ಸ್ಥಾಪನೆಗೆ ಎರಡೂ ದೇಶಗಳು ಉತ್ಸುಕವಾಗಿದ್ದು, 2025ರ ಸೆಪ್ಟೆಂಬರ್ನಿಂದ ಈಚೆಗೆ ಉಭಯ ದೇಶಗಳ ಸಚಿವರ ನಡುವೆ ನಡೆದ ಐದನೇ ಸಭೆ ಇದಾಗಿದೆ ಎಂದು ಗ್ಲೋಬಲ್ ಅಪೇರ್ಸ್ ಕೆನಡಾ (ಜಿಎಸಿ) ಭಾನುವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.