ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಜೆಡಿಎಸ್‌ ಸ್ವತಂತ್ರ ಅಸ್ತಿತ್ವ ಉಳಿಸಿಕೊಳ್ಳಲಿದೆ: ಸಚಿವ ಕೆ.ಕೃಷ್ಣನ್‌ಕುಟ್ಟಿ

Published 22 ಅಕ್ಟೋಬರ್ 2023, 10:14 IST
Last Updated 22 ಅಕ್ಟೋಬರ್ 2023, 10:14 IST
ಅಕ್ಷರ ಗಾತ್ರ

ತಿರುವನಂತಪುರ: ಕರ್ನಾಟಕದಲ್ಲಿ ಬಿಜೆಪಿ ಜೊತೆಗಿನ ಮೈತ್ರಿಗೆ ಕೇರಳ ಜೆಡಿಎಸ್‌ ಘಟಕ ವಿರೊಧ ವ್ಯಕ್ತಪಡಿಸಿದ್ದು ಸ್ವತಂತ್ರವಾಗಿ ಅಸ್ತಿತ್ವ ಉಳಿಸಿಕೊಳ್ಳಲಿದೆ. 

ಈ ಬಗ್ಗೆ ವಿದ್ಯುತ್ ಸಚಿವ ಕೆ.ಕೃಷ್ಣನ್‌ಕುಟ್ಟಿ ಹೇಳಿದ್ದಾರೆ.

ಜೆಡಿಎಸ್‌ನ ರಾಜ್ಯ ಘಟಕವು ಸ್ವತಂತ್ರವಾಗಿ ಅಸ್ತಿತ್ವ ಉಳಿಸಿಕೊಳ್ಳಲಿದೆ ಎಂದು ರಾಜ್ಯದ ವಿದ್ಯುತ್ ಸಚಿವ ಕೆ.ಕೃಷ್ಣನ್‌ಕುಟ್ಟಿ ಅವರು ಹೇಳಿಕೆ ನೀಡಿದ್ದಾರೆ.

‘ಬಿಜೆಪಿ ಜೊತೆಗಿನ ಮೈತ್ರಿಯು ಸ್ವೀಕಾರಾರ್ಹವಲ್ಲ. ಇದು, ಸರಿಯಾದ ನಿರ್ಧಾರವಲ್ಲ’ ಎಂದು ಕರ್ನಾಟಕದಲ್ಲಿರುವ ಪಕ್ಷದ ನಾಯಕತ್ವಕ್ಕೂ ನಾನು ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಮ್ಯಾಥ್ಯೂ ಅವರಿಗೆ ತಿಳಿಸಿದ್ದೇವೆ’ ಎಂದರು.

‘ನಾವು ಬಾಂಧವ್ಯ ಕಡಿದುಕೊಳ್ಳುತ್ತಿದ್ದು, ಸ್ವತಂತ್ರವಾಗಿ ಇರುತ್ತೇವೆ ಎಂದು ತಿಳಿಸಿದೆವು. ಪಕ್ಷದ ರಾಜ್ಯ ಸಮಿತಿ ಸಭೆ ನಿರ್ಧಾರವು ಇದೇ ಆಗಿದೆ’ ಎಂದು ತಿಳಿಸಿದರು. 

ಮೈತ್ರಿ ಹಿನ್ನೆಲೆಯಲ್ಲಿ, ಜೆಡಿಎಸ್‌ನಿಂದ ಮೈತ್ರಿ ಕಡಿದುಕೊಳ್ಳದಿರುವುದಕ್ಕೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಮೈತ್ರಿಕೂಟವು ಸಿಪಿಎಂ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಎಲ್‌ಡಿಎಫ್‌ ಮೈತ್ರಿ ಕೂಟದ ಭಾಗವಾಗಿರುವ ಜೆಡಿಎಸ್, ಬಿಜೆಪಿ ಜೊತೆಗೆ ಮೈತ್ರಿ ಹೊಂದಿರುವುದಕ್ಕೆ ತಮ್ಮ ಸಹಮತವಿ ಇದೆ ಎಂಬುದನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರೂ ಇತ್ತೀಚೆಗೆ ನಿರಾಕರಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT