ಇದು ನನಗೆ ಸಂತೋಷದ ಗಳಿಗೆ. ನನ್ನ ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. 10ನೇ ತರಗತಿಯಿಂದಲೇ ನಾನು ಜೆಇಇ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ತಯಾರಿಯಲ್ಲಿ ಅಂಥ ವಿಶೇಷವೇನೂ ಇರಲಿಲ್ಲ. ನನ್ನ ಮುಖ್ಯ ಗುರಿ ಪಠ್ಯವನ್ನು ಸರಿಯಾದ ಸಮಯಕ್ಕೆ ಓದಿ ಮುಗಿಸುವುದು. ಎಚ್.ಸಿ. ವರ್ಮಾ ಮತ್ತು ಇರೋಡೋವ್ ಪುಸ್ತಕಗಳಲ್ಲಿನ ಮಾದರಿ ಪ್ರಶ್ನೆಗಳನ್ನು ಬಿಡಿಸುತ್ತಿದ್ದೆ. ಇದು ನನ್ನ ಅನುಕೂಲಕ್ಕೆ ಬಂದಿತು. ಆದರೆ, ಎನ್‌ಸಿಇಆರ್‌ಟಿ ಪಠ್ಯಗಳಿಗೆ ಹೆಚ್ಚು ಒತ್ತು ನೀಡಿದೆ