ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರ್ಖಂಡ್‌: ಜನನ–ಮರಣದ ನೋಂದಣಿಗೆ ಹೊಸ ಅಭಿಯಾನ

Published 14 ಜುಲೈ 2023, 15:33 IST
Last Updated 14 ಜುಲೈ 2023, 15:33 IST
ಅಕ್ಷರ ಗಾತ್ರ

ರಾಂಚಿ: ಜನನ ಮತ್ತು ಮರಣಗಳ ನೋಂದಣಿಯನ್ನು ಶೇಕಡ 100 ಸಾಧಿಸುವ ದೃಷ್ಟಿಯಿಂದ ಜಾರ್ಖಂಡ್ ಸರ್ಕಾರ ಒಂದು ತಿಂಗಳ ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಹಣಕಾಸು ಸಚಿವ ರಾಮೇಶ್ವರ ಓರಾನ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಶುಕ್ರವಾರ ಆರಂಭವಾದ ಈ ಅಭಿಯಾನ ಆಗಸ್ಟ್ 14ರಂದು ಕೊನೆಗೊಳ್ಳಲಿದೆ.

‘ಭವಿಷ್ಯದಲ್ಲಿ ಯಾವುದೇ ಒಂದು ಮಗುವು ಜನನ ಪ್ರಮಾಣಪತ್ರ ಇರದೇ ಇರಬಾರದು. ಮರಣದ ನೋಂದಣಿಯೂ ಅಷ್ಟೇ ಪ್ರಮುಖವಾಗಿದೆ. ಪಿತ್ರಾರ್ಜಿತ ಆಸ್ತಿ ಹಂಚಿಕೆ ಅಥವಾ ನ್ಯಾಯಾಲಯ ಪ್ರಕರಣಗಳಲ್ಲಿ ಇದು ಪ್ರಮುಖವಾಗುತ್ತದೆ. ಈ ಹಿಂದೆ  ದಾಖಲೆಗಳಿಲ್ಲದೆ ಬಹ‌ಳಷ್ಟು ಜನ ಹಲವು ಸಮಸ್ಯೆ ಎದುರಿಸಿದ್ದಾರೆ’ ಎಂದರು. 

‘ಶಾಲಾ ಮಕ್ಕಳ ಜನನ ನೋಂದಣಿಯು ಅಭಿಯಾನದ ಸಮಯದಲ್ಲಿ ಮಾಡಲಾಗುವುದು. ಈ ಕುರಿತು ಈಗಾಗಲೇ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಖೆ ಕಾರ್ಯದರ್ಶಿ ಕೆ.ರವಿ ಕುಮಾರ್ ‌ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT