ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂಜಾನಿಯಾ ಅಧ್ಯಕ್ಷೆ ಹಸನ್‌ಗೆ ಗೌರವ ಡಾಕ್ಟರೇಟ್‌ ನೀಡಿದ ದೆಹಲಿಯ ಜೆಎನ್‌ಯು

Published 10 ಅಕ್ಟೋಬರ್ 2023, 11:19 IST
Last Updated 10 ಅಕ್ಟೋಬರ್ 2023, 11:19 IST
ಅಕ್ಷರ ಗಾತ್ರ

ನವದೆಹಲಿ: ತಾಂಜಾನಿಯಾ ಅಧ್ಯಕ್ಷೆ ಸಾಮಿಯಾ ಸುಲುಹು ಹಸನ್‌ ಅವರಿಗೆ ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಮಂಗಳವಾರ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದೆ.

ಭಾರತ-ತಾಂಜಾನಿಯಾ ಸಂಬಂಧಗಳನ್ನು ಉತ್ತಮವಾಗಿಸುವಲ್ಲಿ ಹಾಗೂ ಆರ್ಥಿಕ ರಾಜತಾಂತ್ರಿಕತೆಯನ್ನು ಉತ್ತೇಜಿಸಿ, ಪ್ರಾದೇಶಿಕ ಏಕೀಕರಣ ಮತ್ತು ಬಹುಪಕ್ಷೀಯತೆಯಲ್ಲಿ ಯಶಸ್ಸನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದನ್ನು ಪರಿಗಣಿಸಿ ಹಸನ್‌ ಅವರಿಗೆ ಗೌರವ ಪದವಿ ನೀಡಲಾಗಿದೆ.

ಗೌರವ ಸ್ವೀಕರಿಸಿದ ಬಳಿಕ ಮಾತನಾಡಿದ ಹಸನ್‌ ಅವರು, ಆಫ್ರಿಕಾದ ಪುಟ್ಟ ಹಳ್ಳಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿ ದೇಶದ ಅಧ್ಯಕ್ಷೆ ಸ್ಥಾನಕ್ಕೆ ಏರಿದ ಜೀವನ ಪಯಣವನ್ನು ಹಂಚಿಕೊಂಡರು.

‘ಭಾರತದ ಬಗ್ಗೆ ಪ್ರೀತಿ ಹುಟ್ಟಲು ಯಾವುದೇ ಮಧ್ಯಮಾರ್ಗವಿಲ್ಲ ಎಂದು ಜಗತ್ತು ಹೇಳುತ್ತದೆ, ಆದರೆ ಭಾರತೀಯ ಹಾಡು, ಭಾರತೀಯ ಚಲನಚಿತ್ರ ಅಥವಾ ಭಾರತೀಯ ಪಾಕ ಪದ್ಧತಿಯಾಗಿರಬಹುದು.. ಇವುಗಳು ಮಾಡುವ ಮೋಡಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ನಾನು ಭಾರತಕ್ಕೆ ಮೊದಲ ಬಾರಿಗೆ 1998 ರಲ್ಲಿ ಹೈದರಾಬಾದ್‌ಗೆ ಅಧ್ಯಯನಕ್ಕೆಂದು ಬಂದಾಗ ಅದನ್ನು ಅನುಭವಿಸಿದ್ದೇನೆ’ ಎಂದರು.

’ಇಂದು ನಾನು ಇಲ್ಲಿ ವಿಶ್ವವಿದ್ಯಾಯಲಯ ಸದಸ್ಯೆಯಾಗಿ ನಿಂತಿದ್ದೇನೆ ಹೊರತು ಅಥಿತಿಯಾಗಿ ಅಲ್ಲ. ಇದು ಭಾರತ ಒಂದು ಅದ್ಭುತ ದೇಶ ಎನ್ನುವುದನ್ನು ಹೇಳುತ್ತದೆ’ ಎಂದು ಭಾರತದ ಬಗೆಗಿನ ಒಲವನ್ನು ವ್ಯಕ್ತಪಡಿಸಿದರು.

ನಾಲ್ಕು ದಿನಗಳ ಪ್ರವಾಸಕ್ಕೆಂದು ತಾಂಜಾನಿಯಾ ಅಧ್ಯಕ್ಷೆ ಹಸನ್‌ ಅವರು ಭಾರತಕ್ಕೆ ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT