ನವದೆಹಲಿ:ಕಾರ್ಗಿಲ್ ವಿಜಯ ದಿನದ ಅಂಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ಕಾರ್ಗಿಲ್ ‘ವಿಜಯ ಓಟ’ ಆಯೋಜಿಸಲಾಗಿದೆ.
ದೇಶ ಕಾರ್ಗಿಲ್ ವಿಜಯದ 20ರ ಸಂಭ್ರಮದಲ್ಲಿದೆ. ಇದರ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಇಲ್ಲಿನ ವಿಜಯ್ ಚೌಕದಲ್ಲಿ ಬೆಳಿಗ್ಗೆ ‘ವಿಜಯ ಓಟ’ಕ್ಕೆ ಲೆಫ್ಟಿನೆಂಟ್ ಜನರಲ್ ಅಶ್ವಿನಿ ಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
Delhi: Kargil 'victory run' flagged off by Lieutenant-General Ashwani Kumar, from Vijay Chowk. The run will conclude at India Gate. #KargilVijayDiwaspic.twitter.com/3g27kT6oq5
ಇಡೀ ದೇಶ ಕಾರ್ಗಿಲ್ ವಿಜಯದ 20ರ ಸಂಭ್ರಮದಲ್ಲಿರುವ ಈ ಹೊತ್ತಿನಲ್ಲಿ ಅದಕ್ಕೆ ಸಂಬಂಧಿಸಿದ ಮಾಹಿತಿ, ಲೇಖನ, ವಿಶೇಷ ವರದಿಗಳು ಪ್ರಜಾವಾಣಿ ಜಾಲತಾಣದಲ್ಲಿ ಸರಣಿಯಾಗಿ ಪ್ರಕಟವಾಗಲಿವೆ. ಸೈನಿಕರಿಗೆ ಕುಟುಂಬದವರಿಂದ ದೊರೆಯುವ ಬೆಂಬಲವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕ ಹೊರಟ ಮೊದಲ ಲೇಖನ ಇಲ್ಲಿದೆ... ಸೈನಿಕರ ‘ಗೃಹ’ಬಲ