ನವದೆಹಲಿ (ಪಿಟಿಐ): ‘ಕರ್ನಾಟಕವು ಅಭಿವೃದ್ಧಿಯ ಸ್ಫೂರ್ತಿಸೆಲೆ. ಹಲವಾರು ವಲಯಗಳಲ್ಲಿ ಅದು ದೇಶಕ್ಕೆ ಕೊಡುಗೆ ನೀಡುತ್ತಿದೆ. ಈ ಅದ್ಭುತ ರಾಜ್ಯದ ಜನರ ಸೇವೆ ಸಲ್ಲಿಸುವುದು ಒಂದು ಗೌರವ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕರ್ನಾಟಕವನ್ನು ಬಣ್ಣಿಸಿದ್ದಾರೆ.

ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕಕ್ಕೆ ಭೇಟಿ ನೀಡಿದ ಮರುದಿನ ವ್ಯಕ್ತಿಯೊಬ್ಬರ ಟ್ವೀಟ್‌ಗೆ ಮೋದಿ ಹೀಗೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದಾರೆ.

ಮೊದಲಿಗೆ ಮಂಡ್ಯ ಭೇಟಿಯ ಕೆಲ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಅವರು, ‘ಮಂಡ್ಯ ಅದ್ಭುತವಾಗಿತ್ತು. ಅಲ್ಲಿಯ ಜನರ ಪ್ರೀತಿ ಸದಾಕಾಲ ನೆನೆಯುವಂಥದ್ದು’ ಎಂದು ಬರೆದಿದ್ದರು.

ಭಾನುವಾರ ಕರ್ನಾಟಕಕ್ಕೆ ಭೇಟಿ ನೀಡಿದ್ದ ಅವರು, ಸುಮಾರು ₹16,000 ಕೋಟಿ ಮೊತ್ತದಲ್ಲಿ ನಿರ್ಮಾಣವಾಗಿರುವ ಮೈಸೂರು–ಬೆಂಗಳೂರು ದಶಪಥ ಹೆದ್ದಾರಿ ಉದ್ಘಾಟಿಸಿದ್ದರು. ಮಂಡ್ಯ ಮತ್ತು ಧಾರವಾಡದಲ್ಲಿ ರ‍್ಯಾಲಿ ನಡೆಸಿದ್ದರು.

ಸೋಮಣ್ಣ ನಮ್ಮ ಜೊತೆಯೇ ಇರುತ್ತಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.