ಅಯೋಧ್ಯೆ:ಕಾರ್ತೀಕ ಪೂರ್ಣಿಮೆ ನಿಮಿತ್ತ ಮಂಗಳವಾರ ಅಯೋಧ್ಯೆಯ ಸರಯೂ ನದಿಯಲ್ಲಿ ಸಾವಿರಾರು ಭಕ್ತರು ಭಾರಿ ಬಿಗಿಭದ್ರತೆಯ ನಡುವೆ ಪವಿತ್ರ ಸ್ನಾನ ಮಾಡಿದರು.

ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ನೀಡಿದ ತೀರ್ಪಿನ ನಂತರ ಅಯೋಧ್ಯೆಯಲ್ಲಿ ನಡೆದ ಮೊದಲ ಧಾರ್ಮಿಕ ಕಾರ್ಯಕ್ರಮ ಇದಾಗಿದೆ. ಮಂಗಳವಾರ ಬೆಳಿಗ್ಗೆ 5.34 ನಿಮಿಷಕ್ಕೆ ಶುರುವಾದ ಪವಿತ್ರ ಸ್ನಾನದ ಸಮಯ ಸಂಜೆ 6.42ಕ್ಕೆ ಕೊನೆಗೊಂಡಿತು.

ದಾರಿಯುದ್ದಕ್ಕೂ ‘ಸೀತಾ ರಾಮ್’ ಮಂತ್ರ ಪಠಿಸುತ್ತಾ ನದಿಯತ್ತ ಬಂದ ಜನರು ಪವಿತ್ರ ಸ್ನಾನ ಕೈಗೊಂಡರು. ಭಕ್ತರಲ್ಲಿ ಬಹುತೇಕರು ನದಿ ಪಕ್ಕದಲ್ಲೇ ಹಿಂದಿನ ದಿನವೇ ಮೊಕ್ಕಾಂ ಹೂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.